Monday, June 8, 2026
Homeತಾಜಾ ಸುದ್ದಿನಿಮ್ಮ ಮಗಳನ್ನು ಐಟಂ ಎಂದು ಕರೆದರೆ ಸುಮ್ಮನಿರುತ್ತಿದ್ರಾ? ಸೋನಿಯಾ ಗಾಂಧಿಗೆ ಇಮರ್ತಿ ದೇವಿ ಪ್ರಶ್ನೆ..

ನಿಮ್ಮ ಮಗಳನ್ನು ಐಟಂ ಎಂದು ಕರೆದರೆ ಸುಮ್ಮನಿರುತ್ತಿದ್ರಾ? ಸೋನಿಯಾ ಗಾಂಧಿಗೆ ಇಮರ್ತಿ ದೇವಿ ಪ್ರಶ್ನೆ..

- Advertisement -
- Advertisement -

ಭೋಪಾಲ್​: ಮಧ್ಯಪ್ರದೇಶದ ಡಾಬ್ರಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಅಂಗವಾಗಿ ನಡೆದ ಪ್ರಚಾರ ಸಭೆಯಲ್ಲಿ ಹಿರಿಯ ನಾಯಕ ಕಮಲ್​ನಾಥ್​ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್​ನಾಥ್,​ ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸಚಿವೆ ಇರ್ಮತಿ ದೇವಿ ಅವರನ್ನು ‘ಏನು​ ಐಟಂ ಇವಳು’ ಎಂದಿದ್ದರು. ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಮಲನಾಥ್ ರ ಶಬ್ದ ಬಳಕೆಯಿಂದ ಕೆಂಡಾಮಂಡಲವಾಗಿರುವ ಇರ್ಮತಿ ದೇವಿ, ಸೋನಿಯಾ ಗಾಂಧಿಯನ್ನು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. “ನಾನು ಒಬ್ಬಳು ಬಡ ಕುಟುಂಬದಿಂದ ಬಂದ ಹೆಣ್ಣುಮಗಳು. ನನ್ನ ಮೇಲೆ ಈ ರೀತಿ ಕೆಟ್ಟ ಶಬ್ದಗಳಿಂದ ಟೀಕೆ ಮಾಡುವುದು ಎಷ್ಟು ಸರಿ? ನೀವು ಒಬ್ಬ ತಾಯಿ, ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ ‘ಐಟಂ’ ಎಂದು ಹೇಳಿದ್ದರೆ ನೀವು ಸುಮ್ಮನಿರುತ್ತಿದ್ರಾ ಎಂದು ಇಮರ್ತಿದೇವಿಯವರು ಸೋನಿಯಾಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವ ಕಮಲ್ ನಾಥ್ ರಂತವರನ್ನು ಕೂಡಲೇ ನಿಮ್ಮ ಪಕ್ಷದಿಂದ ತೆಗೆದುಹಾಕಬೇಕು. ಹಾಗೆಯೆ ಇಂತಹ ಶಬ್ದ ಬಳಕೆ ಮಾಡುವಾಗ ಕಮಲನಾಥ್ ಜೊತೆ ವೇದಿಕೆ ಮೇಲಿದ್ದ ವಿಜಯಲಕ್ಷ್ಮೀ ಸಾಧು ಮುಸಿಮುಸಿ ನಗುತ್ತಿದ್ದರು ಎಂದು ಇಮಾರ್ತಿ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!