Friday, May 3, 2024
Homeತಾಜಾ ಸುದ್ದಿಸ್ಯಾಂಡಲ್ ವುಡ್ ನ ಡ್ರಗ್ ಕೇಸ್-ಪ್ರಿಯಾಂಕಾ ಆಳ್ವ ಒಬೆರಾಯ್ ಗೆ ನೊಟೀಸ್

ಸ್ಯಾಂಡಲ್ ವುಡ್ ನ ಡ್ರಗ್ ಕೇಸ್-ಪ್ರಿಯಾಂಕಾ ಆಳ್ವ ಒಬೆರಾಯ್ ಗೆ ನೊಟೀಸ್

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನ ಡ್ರಗ್ ಕೇಸಿಗೆ ಸಧ್ಯ ವಿರಾಮ ದೊರೆಯುವಂತೆ ಕಾಣುತ್ತಿಲ್ಲ. ಅಗೆದಷ್ಟು ಆಳಕ್ಕೆ ಹೋಗುವ ತನಿಖೆಯಲ್ಲಿ ಕೇಂದ್ರ ಅಪರಾಧ ದಳ(ಸಿಸಿಬಿ) ಇದೀಗ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿ ಹಾಗೂ ಆದಿತ್ಯ ಆಳ್ವ ಸೋದರಿ ಪ್ರಿಯಾಂಕಾ ಆಳ್ವ ಒಬೆರಾಯ್ ಗೆ ನೊಟೀಸ್ ನೀಡಿದೆ.

ಡ್ರಗ್ ಕೇಸಿನಲ್ಲಿ ಆದಿತ್ಯ ಆಳ್ವ ಪ್ರಮುಖ ಆರೋಪಿ. ಆದಿತ್ಯ ಆಳ್ವ ವಿರುದ್ಧ ಈಗಾಗಲೇ ಲುಕ್ ಔಟ್ ನೊಟೀಸ್ ಜಾರಿ ಮಾಡಲಾಗಿದ್ದು ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಿನ್ನೆ ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಬೆಂಗಳೂರು ಸಿಸಿಬಿ ಪೊಲೀಸರು ಮುಂಬೈಯಲ್ಲಿರುವ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿದ್ದರು.
ಇದೀಗ ಸೋದರನ ಮೇಲಿನ ಡ್ರಗ್ ಕೇಸಿನ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಿಯಾಂಕಾ ಆಳ್ವಗೆ ನೊಟೀಸ್ ನೀಡಲಾಗಿದೆ.

- Advertisement -
spot_img

Latest News

error: Content is protected !!