Saturday, June 6, 2026
Homeಕರಾವಳಿವಿಟ್ಲ: ಇತಿಹಾಸ ಪ್ರಸಿದ್ದ ಕೇಪು ಉಳ್ಳಾಲ್ತಿ ದೇವಸ್ಥಾನದಲ್ಲಿ ಕಳ್ಳತನ

ವಿಟ್ಲ: ಇತಿಹಾಸ ಪ್ರಸಿದ್ದ ಕೇಪು ಉಳ್ಳಾಲ್ತಿ ದೇವಸ್ಥಾನದಲ್ಲಿ ಕಳ್ಳತನ

- Advertisement -
- Advertisement -

ವಿಟ್ಲ: ಇತಿಹಾಸ ಪ್ರಸಿದ್ದ ಕೇಪು ಉಳ್ಳಾಲ್ತಿ ದೇವಸ್ಥಾನ ನುಗ್ಗಿದ ಕಳ್ಳರು ಬೆಳ್ಳಿಯ ವಸ್ತುಗಳು ಹಾಗೂ ಕಾಣಿಕೆ ಹಣವನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದೆ.

ಕಜಂಬು ಜಾತ್ರೆಗೆ ಹೆಸರುವಾಸಿಯಾದ ಕಾರ್ಣಿಕದ ದೇವಸ್ಥಾನ ಇದಾಗಿದ್ದು, ವಿಟ್ಲ ಅರಮನೆಯ ಆಡಳಿತಕ್ಕೊಳಪಟ್ಟ ದೇವಸ್ಥಾನಗಳಲ್ಲಿ ಒಂದಾಗಿದೆ. ಇದೇ ಮೊದಲ ಬಾರಿಗೆ ಗರ್ಭಗುಡಿಗೆ ಪ್ರವೇಶಿಸಿದ ಕಳ್ಳರು ಅರ್ಧ ಕೆಜಿಗೂ ಅಧಿಕ ತೂಕದ ಬೆಳ್ಳಿ ವಸ್ತು ಹಾಗೂ ಕಾಣಿಕೆ ಹಣ ಕಳವುಗೈದಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರ, ಬೆರಳಚ್ಚು ತಜ್ಞರ ಪರಿಶೀಲನೆ ನಡೆಸಿದ್ದಾರೆ. ಕಾರ್ಣಿಕದ ದೇವಸ್ಥಾನ ಕಳ್ಳತನ ಜನರ ಆತಂಕಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!