Friday, June 5, 2026
Homeಕರಾವಳಿಉಡುಪಿರಾಷ್ಟ್ರೀಯ ಹೆದ್ದಾರಿ ಸೇತುವೆ ಕೆಳಗೆ ಶವ ಪತ್ತೆ-ಹತ್ಯೆಯ ಶಂಕೆ!

ರಾಷ್ಟ್ರೀಯ ಹೆದ್ದಾರಿ ಸೇತುವೆ ಕೆಳಗೆ ಶವ ಪತ್ತೆ-ಹತ್ಯೆಯ ಶಂಕೆ!

- Advertisement -
- Advertisement -

ಕುಂದಾಪುರ : ಇಲ್ಲಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಸೇತುವೆ ಕೆಳಗೆ ಸುಮಾರು 40 ವರ್ಷ ಪ್ರಾಯದ ಗಂಡಸಿನ ಶವವೊಂದು ಗೋಚರಿಸಿದ್ದು ,ಹತ್ಯಾಶಂಕೆ ವ್ಯಕ್ತವಾಗಿದೆ.
ಲುಂಗಿ ಹಾಗೂ ಶರ್ಟ್ ಧರಿಸಿರುವ ಮೃತ ವ್ಯಕ್ತಿಯ ದೇಹದ ಮೇಲೆ ನೇಣು ಬಿಗಿದ ರೀತಿಯಲ್ಲಿ ಹಗ್ಗವೊಂದು ಕಂಡು ಬಂದಿದ್ದು ಶವವು ಅಂಗಾತ ಮಲಗಿಸಿದ ರೀತಿಯಲ್ಲಿ ಸೇತುವೆ ಕೆಳಗೆ ಗೋಚರಿಸಿದೆ.
ಬೆಳಿಗ್ಗೆ ಸೇತುವೆ ಮೇಲೆ ಸಾಗುತ್ತಿದ್ದ ಸಾರ್ವಜನಿಕ ರೋರ್ವರು ಮೃತ ದೇಹವನ್ನು ಗಮನಿಸಿ ಮಾಹಿತಿ ನೀಡಿದರೂ ಹಲವು ಗಂಟೆಗಳ ನಂತರ ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿದ್ದು ಸಾರ್ವಜನಿಕ ಅಸಹನೆಗೆ ಕಾರಣವಾಯಿತು. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!