Friday, June 5, 2026
Homeಕರಾವಳಿ"ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಬಂಧನ"

“ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಬಂಧನ”

- Advertisement -
- Advertisement -

ಉಪ್ಪಿನಂಗಡಿ: ತನ್ನ ಪತ್ನಿ ಶೈನಿ ಹಾಗೂ ಅವರ ಸಂಬಂಧಿ ಝಾನ್ಸಿ ಎಂಬವರ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಬಿಜು ಥೋಮಸ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಪರಾರಿಯಾಗುವ ಉದ್ದೇಶದಿಂದ ಉಪ್ಪಿನಂಗಡಿ ಬಸ್‌‌ ನಿಲ್ದಾಣದ ಬಳಿಯಿದ್ದಾಗ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಪುತ್ತೂರು ವೃತ್ತಕಛೇರಿಯ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ದ್ವೇಷದಿಂದ ಕೊಲ್ಲುವ ಉದ್ದೇಶ ಹೊಂದಿದ್ದು ಈ ಕೃತ್ಯ ನಡೆಸಿರುವುದಾಗಿ ಕಂಡುಬಂದಿದ್ದು, ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!