Monday, June 15, 2026
Homeತಾಜಾ ಸುದ್ದಿ"ಮಂಗಳೂರು - ದೆಹಲಿ ನಡುವಿನ ವಿಮಾನ ಸಂಚಾರ ಇಂದಿನಿಂದ ಪುನರಾರಂಭ"

“ಮಂಗಳೂರು – ದೆಹಲಿ ನಡುವಿನ ವಿಮಾನ ಸಂಚಾರ ಇಂದಿನಿಂದ ಪುನರಾರಂಭ”

- Advertisement -
- Advertisement -

ಮಂಗಳೂರು: ಕೊರೊನಾ ಮಹಾಮಾರಿಯಿಂದ ಎಲ್ಲಾ ವರ್ಗದ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೊರೊನಾ ಎಫೆಕ್ಟ್ ನಿಂದ ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಲಾಕ್‌ಡೌನ್ ಸಡಿಲಿಕೆ ಯಿಂದ ಜನ ಚೇತರಿಕೆ ಕಾಣುತ್ತಿದ್ದು ವಿಮಾನಯಾನ ಕೂಡ ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದೆ.

ಇಂದಿನಿಂದ ಮಂಗಳೂರು-ದೆಹಲಿಗೆ ವಿಮಾನಯಾನ ಆರಂಭಗೊಂಡಿದೆ. ಸ್ಪೈಸ್ ಜೆಟ್ ಸಂಸ್ಥೆ ಮಂಗಳೂರಿನಿಂದ ನವದೆಹಲಿಗೆ ವಿಮಾನಯಾನ ಪ್ರಾರಂಭಿಸುವ ಮೂಲಕ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿದೆ.

ವಿಮಾನ ಸೇವೆ ಮಂಗಳವಾರ ಮತ್ತು ಭಾನುವಾರ ಮಾತ್ರ ಇರಲಿದ್ದು. ಇಂದು ಬೆಳಗ್ಗೆ ನವದೆಹಲಿಯಿಂದ ಟೇಕ್ ಆಫ್ ಆಗಿರುವ ವಿಮಾನ ಮಧ್ಯಾಹ್ನ 12.35 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಇನ್ನು ಇದೇ ವಿಮಾನ ಮಧ್ಯಾಹ್ನ 1.10ಕ್ಕೆ ಮಂಗಳೂರಿನಿಂದ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

- Advertisement -

Latest News

error: Content is protected !!