Saturday, June 6, 2026
Homeತಾಜಾ ಸುದ್ದಿಮುಂಬೈ: ಭಿವಾಂಡಿ ಕಟ್ಟಡ ದುರಂತ, ಸಾವಿನ ಸಂಖ್ಯೆ 18ಕ್ಕೆ ಏರಿಕೆ

ಮುಂಬೈ: ಭಿವಾಂಡಿ ಕಟ್ಟಡ ದುರಂತ, ಸಾವಿನ ಸಂಖ್ಯೆ 18ಕ್ಕೆ ಏರಿಕೆ

- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ಭಿವಾಂಡಿ ಪ್ರದೇಶದಲ್ಲಿ ಸಂಭವಿಸಿದ 3 ಅಂತಸ್ತಿದ ಕಟ್ಟಡ ಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಕಟ್ಟಡಡದ ಅವಶೇಷಗಳಡಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸೋಮವಾರ ಬೆಳಗಿನ ಜಾವ 3.45ರ ಸಂದರ್ಭದಲ್ಲಿ ಭಿವಾಂಡಿಯಲ್ಲಿ ಕಟ್ಟಡ ದುರಂತ ಸಂಭವಿಸಿತ್ತು. ಮೂರು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ಸ್ಥಳದಲ್ಲೇ ಎಂಟು ಮಂದಿ ಪ್ರಾಣ ಬಿಟ್ಟಿದ್ದು, ಸ್ಥಳೀಯರೇ ಕಟ್ಟಡಗಳಡಿ ಸಿಲುಕಿದ್ದ ಕನಿಷ್ಠ 20 ಕಾರ್ಮಿಕರನ್ನು ರಕ್ಷಿಸಿದ್ದರು.

ಭಿವಂಡಿ ಪಟ್ಟಣದ ಪಟೇಲ್​ ಕಾಂಪೌಂಡ್ ಪ್ರದೇಶದಲ್ಲಿ ಕಟ್ಟಡ ಕುಸಿದಿದೆ. ಈ ಕಟ್ಟಡದಲ್ಲಿ ಒಟ್ಟು 21 ಫ್ಲ್ಯಾಟ್​​ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ಕುಸಿದು ಅವಘಡ ಸಂಭವಿಸಿತ್ತು.

ಪ್ರಕರಣದ ತನಿಖೆಗೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್​ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಈ ವಿಚಾರವಾಗಿ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!