Thursday, June 4, 2026
Homeಕರಾವಳಿಸುಳ್ಯ: ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟ, ಮಿಥುನ್ ರೈ ಮುಂದೆಯೇ ಮಾತಿನ ಚಕಮಕಿಗಿಳಿದ ಧನಂಜಯ ಅಡ್ಪಂಗಾಯ-ವೆಂಕಪ್ಪ...

ಸುಳ್ಯ: ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟ, ಮಿಥುನ್ ರೈ ಮುಂದೆಯೇ ಮಾತಿನ ಚಕಮಕಿಗಿಳಿದ ಧನಂಜಯ ಅಡ್ಪಂಗಾಯ-ವೆಂಕಪ್ಪ ಗೌಡ

- Advertisement -
- Advertisement -

ಸುಳ್ಯ: ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷ ಬಲವರ್ಧನೆ ಕುರಿತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಕರ್ತರ ಸಭೆಯಲ್ಲಿ ಸ್ಥಳೀಯ ನಾಯಕರಿಬ್ಬರು ಸಭೆಯಲ್ಲೇ ಮಾತಿನ ಚಕಾಮಕಿ ನಡೆಸಿರುವ ಘಟನೆ ನಡೆದಿದೆ. ಈ ಮೂಲಕ ಸುಳ್ಯ ತಾಲೂಕು ಮಟ್ಟದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವು ಸರಿಯಿಲ್ಲ ಎಂಬುವುದು ಜಗಜ್ಜಾಹೀರಾಗಿದೆ.

ಮಾಜಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಮಾತನಾಡಲು ಆರಂಭಿಸಿ ಪಕ್ಷವನ್ನು ತಳ ಮಟ್ಟದಿಂದಲೇ ಎಲ್ಲಾ ನಾಯಕರು ಸಂಘಟಿಸಬೇಕು ಎಂದಾಗ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡ ಧನಂಜಯ ಅಡ್ಪಂಗಾಯ ಅವರು ಎದ್ದು ನಿಂತು, ನಾನು 36 ವರ್ಷಗಳಿಂಧ ಪಕ್ಷ ಸಂಘಟನೆ ಮಾಡುತ್ತಿದ್ದೆನೆ. ದ.ಕ ಜಿಲ್ಲೆಯಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಶಾಸಕರು ಗೆದ್ದಸಂದರ್ಭದಲ್ಲಿ ಸುಳ್ಯದಲ್ಲಿ ಅವರಿಗೆ ಗೆಲ್ಲಿಸಲು ಸಾಧ್ಯವಾಗಿಲ್ಲ ಎಂದಾಗ ಆ ಸಂದರ್ಭದಲ್ಲಿ 1300 ಚಿಲ್ಲರೆ ಮತಗಳ ಅಂತರಕ್ಕೆ ಮಾತ್ರ ಸೋತಿರುವುದು ಎಂದು ವೆಂಕಪ್ಪ ಗೌಡ ಹೇಳಿದರು. ವೆಂಕಪ್ಪ ಗೌಡ ಮತ್ತು ಧನಂಜಯ ಅಡ್ಪಂಗಾಯ ನಡುವಿನ ಜಗಳ ತಾರಕ್ಕೇರಿದಾಗ ಮದ್ಯೆ ಪ್ರವೇಶಿಸಿದ ಮಿಥುನ್ ರೈ, ಧನಂಜಯ ಅಡ್ಪಂಗಾಯರನ್ನು ಸಮಾಧಾನಿಸಲು ಪ್ರಯತ್ನಿಸಿದರು. ನೂರಾರು ಕಾರ್ಯಕರ್ತರ ನಡುವೆಯೇ ನಡೆದ ಈ ವಾಕ್ಸಮರ ಮಿಥುನ್ ರೈಗೆ ಮುಜುಗರ ತರಿಸಿದಂತು ಸುಳ್ಳಲ್ಲ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊ‌ನೆಗೆ ಸಭೆಯನ್ನು ಮೊಟಕುಗೊಳಿಸಲಾಯಿತು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!