Friday, June 5, 2026
Homeತಾಜಾ ಸುದ್ದಿಲೈಟ್ ಆಫ್ ವಿಷಯಕ್ಕೆ ಸಾಂತ್ವನ ಕೇಂದ್ರದಲ್ಲಿ ಜಗಳ ಮಾಡಿಕೊಂಡ ರಾಗಿಣಿ ಮತ್ತು ಸಂಜನಾ !

ಲೈಟ್ ಆಫ್ ವಿಷಯಕ್ಕೆ ಸಾಂತ್ವನ ಕೇಂದ್ರದಲ್ಲಿ ಜಗಳ ಮಾಡಿಕೊಂಡ ರಾಗಿಣಿ ಮತ್ತು ಸಂಜನಾ !

- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ದಂಧೆ ಪ್ರಕರಣದಲ್ಲಿ ಸಿಲುಕಿ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಂದೇ ಕೊಠಡಿಯಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಿರುವುದು ಸದ್ಯ ಸಿಸಿಬಿಗೆ ತಲೆ ನೋವಾಗಿದೆ.

ಹಳೆ ದ್ವೇಷದ ಕಾರಣಕ್ಕೆ ನಟಿ ರಾಗಿಣಿ ಮತ್ತು ಸಂಜನಾ ನಡುವೆ ಹಗೆತನವಿದ್ದು, ಒಬ್ಬರನ್ನು ನೋಡಿದ್ರೆ, ಇನ್ನೊಬ್ಬರಿಗೆ ಆಗುವುದಿಲ್ಲ ಎನ್ನಲಾಗಿದೆ. ಇದೆ ಕಾರಣಕ್ಕೆ ನಿನ್ನೆ ರಾತ್ರಿ ಇಬ್ಬರು ಕಿತ್ತಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ರೂಮ್‌ನಲ್ಲಿ ಲೈಟ್ ಆಫ್ ಮಾಡುವ ವಿಚಾರಕ್ಕೆ ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ.

ಇಬ್ಬರು ‘ಮಾದಕ’ ನಟಿಯರು ಕೊಠಡಿಯಲ್ಲಿ ಪುಸ್ತಕ ಓದುತ್ತಾ ಕುಳಿತಿದ್ರು. ಒಬ್ಬರಿಗೆ ನಿದ್ದೆ ಬಂದ ಹಿನ್ನೆಲೆ ಲೈಟ್ ಆಫ್ ಮಾಡಿದ್ದರು. ಲೈಟ್ ಆಫ್ ಮಾಡಿದ್ದಕ್ಕೆ ಮತ್ತೊಬ್ಬರು ಕ್ಯಾತೆ ತೆಗೆದಿದ್ದಾರೆ. ಅಗ ಇಬ್ಬರ ನಡುವೆ ವಾಕ್ಸಮರ ನಡೆದಿದೆ. ರಾಗಿಣಿ ಮತ್ತು ಸಂಜನಾ ಕೊಠಡಿಯೊಳಗೆ ಮಹಿಳಾ ಪೊಲೀಸ್ ಸಿಬ್ಬಂದಿಯೂ ವಾಸ್ತವ್ಯ ಹೂಡಿದ್ದಾರೆ. ಇಬ್ಬರ ನಡುವೆ ಒಬ್ಬರು ಲೇಡಿ ಇನ್ಸ್​ಪೆಕ್ಟರ್​ ಮತ್ತು ಕಾನ್ಸ್​ಟೇಬಲ್​ ಸಹ ಇದ್ದರು.

- Advertisement -

Latest News

error: Content is protected !!