Saturday, June 6, 2026
Homeತಾಜಾ ಸುದ್ದಿಮುದ್ದಿನ ನಾಯಿಗೆ ಸೀಮಂತ ಮಾಡಿದ ಮನೆ ಮಂದಿ

ಮುದ್ದಿನ ನಾಯಿಗೆ ಸೀಮಂತ ಮಾಡಿದ ಮನೆ ಮಂದಿ

- Advertisement -
- Advertisement -

ವಿಜಯಪುರ: ಗರ್ಭಿಣಿಯರಿಗೆ ಸೀಮಂತ ಮಾಡುವ ಸಂಪ್ರದಾಯ ಸಾಮಾನ್ಯ. ಆದರೇ, ವಿಜಯಪುರ ನಗರದ ನಿವಾಸಿ ಪ್ರಕಾಶ ಕುಂಬಾರ ಅವರು ತಮ್ಮ ಮನೆ ಸಾಕು ನಾಯಿ ‘ಸೋನಮ್ಮ’ ಚೊಚ್ಚಲ ಗರ್ಭಿಣಿಯಾಗಿರುವುದಕ್ಕೆ ಸೀಮಂತ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಕಾಶ ಕುಂಬಾರ ಅವರ ಮನೆಯಲ್ಲಿ ಸಾಕಿರುವ ಪಮೋರಿಯನ್ ತಳಿಯ ಶ್ವಾನವೂ ಗರ್ಭಿಣಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮರಿ ಹಾಕಲಿದೆ. ಅದರ ಪ್ರೀತಿಗೆ ಮತ್ತು ಸ್ವಭಾವಕ್ಕೆ ಮಾರುಹೋದ ಕುಂಬಾರ ಕುಟುಂಬವು ಪ್ರೀತಿಯಿಂದ ಸೀಮಂತ ಕಾರ್ಯ ಶುಕ್ರವಾರ ಮಾಡಿದ್ದಾರೆ.

ಸಂಪ್ರದಾಯದಂತೆ ಕುಟುಂಬದವರು ಸೀರೆ, ಕುಪ್ಪಸ, ಬಂಗಾರ, ಬೆಳ್ಳಿ, ದಂಡಿ, ಹಾರ, ಹಣ್ಣು ಹಂಪಲು ಇತ್ಯಾದಿ ಮಂಗಲ ದ್ರವ್ಯಗಳನ್ನು ಸೋನಮ್ಮಳಿಗೆ (ಶ್ವಾನ) ಅರ್ಪಿಸಿದರು. ಈ ಸಂದರ್ಭದಲ್ಲಿ ಮುತ್ತೈಂದೆಯರು ಶ್ವಾನಕ್ಕೆ ಆರತಿ ಬೆಳಗಿದರು. ಮಹಾದೇವಿ ವಿ.ಕುಂಬಾರ ಸೀಮಂತದ ಪದಗಳನ್ನು ಹಾಡಿದರು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಸೀಮಂತ ಕಾರ್ಯದಲ್ಲಿ ಶ್ವಾನ ಸುಮ್ಮನೆ ಕುಳಿತುಕೊಳ್ಳುವ ಮೂಲಕ ಗಮನಸೆಳೆಯಿತು.

- Advertisement -

Latest News

error: Content is protected !!