Saturday, June 6, 2026
Homeಪ್ರಮುಖ-ಸುದ್ದಿಸಚಿವ ಬಿ. ಶ್ರೀರಾಮುಲು ತಾಯಿ ನಿಧನ

ಸಚಿವ ಬಿ. ಶ್ರೀರಾಮುಲು ತಾಯಿ ನಿಧನ

- Advertisement -
- Advertisement -

ಬಳ್ಳಾರಿ : ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ (95) ಬುಧವಾರ ತಡರಾತ್ರಿ ನಿಧನರಾದರು. ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ಬಳಿಕ ಬಳ್ಳಾರಿಯ ತಮ್ಮ ನಿವಾಸಕ್ಕೆ ತೆರಳಿದ್ದರು. ರಾತ್ರಿ ವಯೋಸಹಜವಾಗಿ ಮೃತಪಟ್ಟಿದ್ದಾರೆ.

ತಾಯಿಯ ನಿಧನದ ಬಗೆಗೆ ಸಚಿವ ಶ್ರೀರಾಮುಕು ಟ್ವೀಟ್ ಮಾಡಿದ್ದು `ನನ್ನ ತಾಯಿಯವರಾದ ಹೊನ್ನೂರಮ್ಮ ಅವರು ನಿನ್ನೆ ತಡ ರಾತ್ರಿ ವಯೋಸಹಜ ಕಾರಣದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ.

`ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿದ್ದ ಅಮ್ಮ, ಇತ್ತೀಚೆಗಷ್ಟೇ ಕೋವಿಡ್ ಸೋಂಕಿಗೆ ತುತ್ತಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಬಳ್ಳಾರಿಯ ಮನೆಗೆ ಹಿಂದಿರುಗಿದ್ದರು’ ಎಂದಿದ್ದಾರೆ.

- Advertisement -

Latest News

error: Content is protected !!