Friday, June 5, 2026
Homeಪ್ರಮುಖ-ಸುದ್ದಿಮಂಜೇಶ್ವರದಲ್ಲಿ ಮೂವರು ಸಹೋದರಿಯರು ನಿಗೂಢ ನಾಪತ್ತೆ

ಮಂಜೇಶ್ವರದಲ್ಲಿ ಮೂವರು ಸಹೋದರಿಯರು ನಿಗೂಢ ನಾಪತ್ತೆ

- Advertisement -
- Advertisement -

ಮಂಜೇಶ್ವರ: ಮೂವರು ಸಹೋದರಿಯರು ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀಯಪದವು ಸಮೀಪದ ನಿವಾಸಿಗಳಾದ 21, 17 ಮತ್ತು 16 ವರ್ಷದ ಮೂವರು ಸಹೋದರಿಯರು ಆಗಸ್ಟ್ 16 ರಂದು ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು ಇದುವರೆಗೂ ವಾಪಸಾಗಿಲ್ಲ ಎಂದು ಹೇಳಲಾಗಿದೆ.

ಮೂವರು ಸಹೋದರಿಯರಲ್ಲಿ ಒಬ್ಬಳ ಬಳಿ ಇತ್ತೀಚೆಗೆ ಮೊಬೈಲ್ ಫೋನ್ ಪತ್ತೆಯಾಗಿತ್ತು. ಮನೆಯವರು ಎಲ್ಲಿಂದ ಮೊಬೈಲ್ ಫೋನ್ ಬಂದಿದೆ ಎಂಬುದರ ಬಗ್ಗೆ ಪ್ರಶ್ನಿಸಿದ್ದರೂ ಸರಿಯಾಗಿ ಉತ್ತರ ನೀಡಿರಲಿಲ್ಲ. ಇದಾದ ನಂತರದಲ್ಲಿ ಮೂವರು ಸಹೋದರಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು ಸೈಬರ್ ಸೆಲ್ ಸಹಾಯದೊಂದಿಗೆ ಯುವತಿಯರ ಪತ್ತೆ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!