Tuesday, November 24, 2026
Homeತಾಜಾ ಸುದ್ದಿಕಾರಿಗಾಗಿ ಮದುವೆ ಮುರಿದ ದೆಹಲಿ ಪೊಲೀಸ್ ವರ; ಮಂಟಪದಲ್ಲೇ ಉಳಿದ ವಧು

ಕಾರಿಗಾಗಿ ಮದುವೆ ಮುರಿದ ದೆಹಲಿ ಪೊಲೀಸ್ ವರ; ಮಂಟಪದಲ್ಲೇ ಉಳಿದ ವಧು

- Advertisement -
- Advertisement -

ಹರಿಯಾಣ: ವರದಕ್ಷಿಣೆಯಾಗಿ ಕೇಳಿದ ಕಾರು ನೀಡಲಿಲ್ಲ ಎಂಬ ಕಾರಣಕ್ಕೆ ವರನೊಬ್ಬ ಮದುವೆಯನ್ನೇ ರದ್ದುಗೊಳಿಸಿ, ವಧುವನ್ನು ಮಂಟಪದಲ್ಲೇ ಬಿಟ್ಟು ಹೋದ ಘಟನೆ ಸೋನಿಪತ್‌ನ ಮಾಮಚಂದ್ ವಾಟಿಕಾದಲ್ಲಿ ನವೆಂಬರ್ 20ರಂದು ನಡೆದಿದೆ.

ಗೊಹಾನಾ ನಿವಾಸಿ, ದೆಹಲಿ ಪೊಲೀಸ್ ಸಿಬ್ಬಂದಿ ಕುಲದೀಪ್ ಎಂಬಾತ ವಧು ಹೀನಾಳನ್ನು ಮದುವೆಯಾಗಲು ನಿರಾಕರಿಸಿದ ಆರೋಪಿ. ಆರು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿದ್ದು, ಎಂ.ಎ ಮತ್ತು ಜೆಬಿಟಿ ಪದವೀಧರೆಯಾದ ಹೀನಾಳ ಮದುವೆಗೆ ತಂದೆ ಸುಭಾಷ್ ಕುಮಾರ್ ಸುಮಾರು 25ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿ, 1,200 ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು.

ಆರಂಭದಲ್ಲಿ ವರದಕ್ಷಿಣೆ ಪಡೆಯುವುದಿಲ್ಲ ಎಂದಿದ್ದ ವರನ ಕಡೆಯವರು, ನಂತರ ಕಾರು ಮತ್ತು ಚಿನ್ನಾಭರಣಗಳಿಗೆ ಬೇಡಿಕೆ ಇಟ್ಟಿದ್ದರು. ವರನ ಕುಟುಂಬಸ್ಥರಿಗೆ ಚಿನ್ನ-ಬೆಳ್ಳಿ ಆಭರಣ ಆರ್ಡರ್ ಮಾಡುವುದರ ಜೊತೆಗೆ 1.32 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನೂ ಖರೀದಿಸಲಾಗಿತ್ತು. 9.5 ಲಕ್ಷ ರೂಪಾಯಿಯ ಹ್ಯುಂಡೈ ಔರಾ ಕಾರನ್ನು ಬುಕ್ ಮಾಡಲಾಗಿತ್ತು. ಆದರೆ, ನವೆಂಬರ್ 19ರಂದು ‘ಟ್ಯಾಕ್ಸಿ ಕಾರು’ ಎಂದು ಮೂದಲಿಸಿ, 13 ಲಕ್ಷ ರೂಪಾಯಿಯ ಮಾರುತಿ ಸುಜುಕಿ ಬ್ರೆಝಾ ಕಾರು ಬೇಕೆಂದು ಪಟ್ಟು ಹಿಡಿದಿದ್ದಾನೆ. ಕೊನೆಯ ಕ್ಷಣದಲ್ಲಿ ಕಾರು ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದಾಗ, ಮದುವೆ ದಿನ ಸಾಮಾನ್ಯ ಉಡುಪಿನಲ್ಲಿ ಬಂದ ವರ, ವಾಗ್ವಾದ ನಡೆಸಿ, ಬೆದರಿಕೆ ಹಾಕಿ ಸುಮಾರು 20-30 ಮಂದಿಯೊಂದಿಗೆ ಮದುವೆ ರದ್ದುಗೊಳಿಸಿ ತೆರಳಿದ್ದಾನೆ.ಘಟನೆ ಸಂಬಂಧ ವಧುವಿನ ತಂದೆ ಸೆಕ್ಟರ್ 27 ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!