Tuesday, November 17, 2026
Homeಕ್ರೀಡೆCSK ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್;‌ IPLಗೆ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್‌ ಧೋನಿ

CSK ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್;‌ IPLಗೆ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್‌ ಧೋನಿ

- Advertisement -
- Advertisement -

ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ಕ್ರಿಕೆಟ್‌ಗೆ ಆಟಗಾರನಾಗಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದು, 2027ರ ಐಪಿಎಲ್ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಐಪಿಎಲ್ ಆರಂಭದಿಂದಲೂ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರಾಗಿದ್ದ ಧೋನಿ, ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಐದು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಇದೀಗ ಆಟಗಾರನಾಗಿ ತಮ್ಮ ಸುದೀರ್ಘ ಪಯಣಕ್ಕೆ ತೆರೆ ಎಳೆದು, ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ.

ಈ ಕುರಿತು ಸಿಎಸ್‌ಕೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದೆ. “ಜೀವಮಾನದಲ್ಲಿ ಒಮ್ಮೆ ಸಿಗುವ ಆಟಗಾರ ಧೋನಿ. ಹೊಸ ಜವಾಬ್ದಾರಿ, ಆದರೆ ಎಂದೆಂದಿಗೂ ಉಳಿಯುವ ಬಾಂಧವ್ಯ. ಅನೇಕ ಗೆಲುವುಗಳು, ಸವಾಲುಗಳು ಮತ್ತು ಮರೆಯಲಾಗದ ನೆನಪುಗಳೊಂದಿಗೆ ಧೋನಿ ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಮುಂದಿನ ಪೀಳಿಗೆಯ ಸೂಪರ್ ಕಿಂಗ್ಸ್ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಚೆನ್ನೈ ಯಾವಾಗಲೂ ಅವರ ಮನೆ” ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.

ಧೋನಿ ಅವರ ಈ ಹೊಸ ಜವಾಬ್ದಾರಿಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

- Advertisement -

Latest News

error: Content is protected !!