Saturday, November 14, 2026
Homeಕರಾವಳಿಮಂಗಳೂರುಮಂಗಳೂರು: ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ಬೈಕ್ ಸವಾರರು

ಮಂಗಳೂರು: ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ಬೈಕ್ ಸವಾರರು

- Advertisement -
- Advertisement -

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ಬಳಿ ರಸ್ತೆ ದಾಟಲು ನಿಂತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗರೋಡಿ ಜಪ್ಪು ನಿವಾಸಿ ಸುಜಾತಾ ಸಿ. ಪಾಟೀಲ್ ಸರ ಕಳೆದುಕೊಂಡವರು. ಅನಾರೋಗ್ಯಪೀಡಿತ ಪತಿಗಾಗಿ ಪ್ರತಿದಿನದಂತೆ ರಾತ್ರಿ 8.35ರ ಸುಮಾರಿಗೆ ಮಂಗಳಾದೇವಿ ದೇವಸ್ಥಾನದ ಬಳಿಯ ಅಂಗಡಿಯಿಂದ ಪಪ್ಪಾಯ ಜ್ಯೂಸ್ ಪಡೆದು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದಾಗ ಈ ಕೃತ್ಯ ನಡೆದಿದೆ. ಪಾಂಡೇಶ್ವರ ಕಡೆಯಿಂದ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಹಿಂಬದಿ ಸವಾರ ಸುಜಾತಾ ಅವರ ಕುತ್ತಿಗೆಯಲ್ಲಿದ್ದ ತಾಳಿ ಸಮೇತ ಸುಮಾರು 15 ಗ್ರಾಂ ತೂಕದ (ಅಂದಾಜು ₹1.50 ಲಕ್ಷ ಮೌಲ್ಯ) ಚಿನ್ನದ ಸರವನ್ನು ಎಗರಿಸಿ ಮಂಗಳಾದೇವಿ ರಸ್ತೆ ಕಡೆಗೆ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಮಹಿಳೆಯ ಕುತ್ತಿಗೆಗೆ ತರಚಿದ ಗಾಯವಾಗಿದೆ. ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!