Saturday, November 14, 2026
Homeಕರಾವಳಿಮಂಗಳೂರುಕಡಬದಲ್ಲಿ ಹಣದ ಬೇಡಿಕೆ ಹಾಗೂ ಹಲ್ಲೆ ಯತ್ನ: ಇಬ್ಬರ ವಿರುದ್ಧ ಪೊಲೀಸ್ ದೂರು

ಕಡಬದಲ್ಲಿ ಹಣದ ಬೇಡಿಕೆ ಹಾಗೂ ಹಲ್ಲೆ ಯತ್ನ: ಇಬ್ಬರ ವಿರುದ್ಧ ಪೊಲೀಸ್ ದೂರು

- Advertisement -
- Advertisement -

ಕಡಬ: ಮೊಬೈಲ್ ಮೂಲಕ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಲು ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ.

ಕುಟ್ರುಪ್ಪಾಡಿ ನಿವಾಸಿ ಕೆ.ಎಂ. ಮ್ಯಾಥ್ಯೂ ಅವರಿಗೆ ಕೋಡಿಂಬಾಳದ ಅನೀಸ್ ಎಂಬಾತ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದನು. ಮ್ಯಾಥ್ಯೂ ಅವರು ಮಗನೊಂದಿಗೆ ಕಡಬದ ಗಣೇಶ್ ಮೆಡಿಕಲ್ ಬಳಿ ಬಂದಾಗ, ಅನೀಸ್ ಹಾಗೂ ವಿಕ್ಟರ್ ಮಾರ್ಟಿಸ್ ಕಾರಿನಲ್ಲಿ ಬಂದು ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 136/2026) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!