Wednesday, November 11, 2026
Homeಪ್ರಮುಖ-ಸುದ್ದಿ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು; 6 ದಿನಗಳಲ್ಲಿ...

‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು; 6 ದಿನಗಳಲ್ಲಿ 823 ಕೋಟಿ ರೂ. ಗಳಿಕೆ!

- Advertisement -
- Advertisement -

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ಬಿಡುಗಡೆಯಾದ ಕೇವಲ ಆರು ದಿನಗಳಲ್ಲೇ ಚಿತ್ರವು ಜಾಗತಿಕ ಮಟ್ಟದಲ್ಲಿ 800 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಪೌರಾಣಿಕ ಮಹಾಕಾವ್ಯವು ಮಂಗಳವಾರ ಒಂದೇ ದಿನ ಭಾರತದಲ್ಲಿ 94.10 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಚಿತ್ರದ ದೇಶೀಯ ಒಟ್ಟು ಗಳಿಕೆ 526.50 ಕೋಟಿ ರೂ. ತಲುಪಿದ್ದು, ವಿದೇಶಿ ಮಾರುಕಟ್ಟೆಯ ಗಳಿಕೆಯನ್ನೂ ಸೇರಿಸಿ ಜಾಗತಿಕ ಕಲೆಕ್ಷನ್ 823.50 ಕೋಟಿ ರೂ.ಗೆ ಏರಿಕೆಯಾಗಿದೆ.

ಚಿತ್ರದ ಇತ್ತೀಚಿನ ದೇಶೀಯ ಗಳಿಕೆಯಲ್ಲಿ ಹಿಂದಿ ಆವೃತ್ತಿ ಅಗ್ರಸ್ಥಾನದಲ್ಲಿದೆ. ಒಟ್ಟು 24,344 ಪ್ರದರ್ಶನಗಳ ಮೂಲಕ ಹಿಂದಿ ಆವೃತ್ತಿ 76 ಕೋಟಿ ರೂ. ಗಳಿಸಿದ್ದರೆ, ಕನ್ನಡ ಆವೃತ್ತಿ 7.75 ಕೋಟಿ ರೂ. ಹಾಗೂ ತೆಲುಗು ಆವೃತ್ತಿ 4 ಕೋಟಿ ರೂ. ಗಳಿಸಿವೆ. ಇನ್ನು ತಮಿಳು ಆವೃತ್ತಿ 3.60 ಕೋಟಿ ರೂ. ಮತ್ತು ಮಲಯಾಳಂ ಆವೃತ್ತಿ 2.75 ಕೋಟಿ ರೂ. ಗಳಿಕೆ ದಾಖಲಿಸಿವೆ.

ಬಿಡುಗಡೆಯಾದ ಮೊದಲ ಆರು ದಿನಗಳಲ್ಲೇ 823 ಕೋಟಿ ರೂ.ಗಳ ಗಡಿ ದಾಟಿರುವ ‘ರಾಮಾಯಣ’ ಚಿತ್ರದತ್ತ ಇದೀಗ ಸಿನಿಪ್ರೇಕ್ಷಕರ ಗಮನ ನೆಟ್ಟಿದೆ.

- Advertisement -

Latest News

error: Content is protected !!