Friday, November 6, 2026
Homeಕರಾವಳಿಪಾವಂಜೆ ಜಂಕ್ಷನ್ ಬಳಿ ಕಂಟೇನರ್ ಲಾರಿ–ಶಾಲಾ ಟ್ಯಾಕ್ಸಿ ನಡುವೆ ಢಿಕ್ಕಿ;  ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಪಾವಂಜೆ ಜಂಕ್ಷನ್ ಬಳಿ ಕಂಟೇನರ್ ಲಾರಿ–ಶಾಲಾ ಟ್ಯಾಕ್ಸಿ ನಡುವೆ ಢಿಕ್ಕಿ;  ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

- Advertisement -
- Advertisement -

ಮಂಗಳೂರು: ಹಳೆಯಂಗಡಿಯ ಪಾವಂಜೆ ಜಂಕ್ಷನ್ ಬಳಿ ಗುರುವಾರ ರಾತ್ರಿ ಕಂಟೇನರ್ ಲಾರಿ ಹಾಗೂ ಶಾಲಾ ಟ್ಯಾಕ್ಸಿ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ವಿಶೇಷ ಚೇತನ ಮಕ್ಕಳು, ಓರ್ವ ಶಿಕ್ಷಕಿ ಮತ್ತು ಟ್ಯಾಕ್ಸಿ ಚಾಲಕ ಸೇರಿದಂತೆ ಆರು ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಳೆಯಂಗಡಿಯಿಂದ ಸುರತ್ಕಲ್ ಕಡೆಗೆ ವಿಶೇಷ ಚೇತನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಜೀಪ್ ಪಾವಂಜೆ ಜಂಕ್ಷನ್‌ನ ಬ್ಯಾರಿಕೇಡ್‌ಗಳ ಸಮೀಪ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಜಂಕ್ಷನ್ ಬಳಿ ಟ್ಯಾಕ್ಸಿ ಚಾಲಕ ಕಂಟೇನರ್ ಲಾರಿಯನ್ನು ಎಡಭಾಗದಿಂದ ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಟ್ಯಾಕ್ಸಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಟ್ಯಾಕ್ಸಿಯ ಹಿಂಭಾಗಕ್ಕೆ ಭಾರೀ ಹಾನಿಯಾಗಿದೆ.

ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ವಿಷಯ ತಿಳಿದ ಸ್ಥಳೀಯ ಆಟೋರಿಕ್ಷಾ ಚಾಲಕರು ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಅಪಘಾತಕ್ಕೀಡಾದ ಟ್ಯಾಕ್ಸಿ ಮತ್ತು ಕಂಟೇನರ್ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

- Advertisement -

Latest News

error: Content is protected !!