Saturday, October 24, 2026
Homeಕರಾವಳಿಮಂಗಳೂರುಚಿಕಿತ್ಸೆ ವಿಳಂಬದಿಂದ ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವಕ ಶಹೀನ್ ಸಾವು; ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರೋಶ,...

ಚಿಕಿತ್ಸೆ ವಿಳಂಬದಿಂದ ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವಕ ಶಹೀನ್ ಸಾವು; ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರೋಶ, ಬಿಗುವಿನ ವಾತಾವರಣ

- Advertisement -
- Advertisement -

ಬೆಂಗಳೂರು: ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ 22 ವರ್ಷದ ಯುವಕ ಶಹೀನ್ ಎಂಬುವವರು ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದುರ್ಮರಣ ಹೊಂದಿದ್ದಾರೆ.

ಇನ್ಶೂರೆನ್ಸ್ ಹಾಗೂ ಡೆಪಾಸಿಟ್ ಹಣಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದೇ ಯುವಕನ ಸಾವಿಗೆ ನೇರ ಕಾರಣ ಎಂದು ಮೃತನ ಕುಟುಂಬಸ್ಥರು ಮತ್ತು ಸ್ನೇಹಿತರು ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದಾಗಿ ಆಸ್ಪತ್ರೆಯ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೂಡಲೇ ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ.

- Advertisement -

Latest News

error: Content is protected !!