Friday, October 23, 2026
Homeತಾಜಾ ಸುದ್ದಿಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಸಂಸದೆ ಪ್ರಿಯಾಂಕಾ ನಿಶ್ಚಿತಾರ್ಥ

ಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಸಂಸದೆ ಪ್ರಿಯಾಂಕಾ ನಿಶ್ಚಿತಾರ್ಥ

- Advertisement -
- Advertisement -

ಬೆಳಗಾವಿ: ಚಿಕ್ಕೋಡಿ ಕ್ಷೇತ್ರದ ಸಂಸದೆ ಹಾಗೂ ಲೋಕಸಭೆಯ ಅತ್ಯಂತ ಕಿರಿಯ ಸಂಸದೆಯರಲ್ಲಿ ಒಬ್ಬರಾದ ಪ್ರಿಯಾಂಕಾ ಜಾರಕಿಹೊಳಿ ಅವರ ನಿಶ್ಚಿತಾರ್ಥ ಸಮಾರಂಭವು ಸರಳ ಹಾಗೂ ಸಂಪ್ರದಾಯಬದ್ಧವಾಗಿ ನೆರವೇರಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿಯಾಗಿರುವ ಪ್ರಿಯಾಂಕಾ ಅವರು ರಾಯಚೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ (CA) ಗೌತಮ್ ಪಾಟೀಲ್ ಅವರೊಂದಿಗೆ ಶೀಘ್ರದಲ್ಲೇ ವಿವಾಹಬಂಧನಕ್ಕೆ ಒಳಗಾಗಲಿದ್ದಾರೆ.

ಗೋಕಾಕ್‌ನ ಹಿಲ್ ಗಾರ್ಡನ್‌ನಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಈ ಶುಭ ಸಮಾರಂಭ ನಡೆಯಿತು. ಕೇವಲ ಕುಟುಂಬಸ್ಥರು ಹಾಗೂ ನಿಕಟವರ್ತಿಗಳ ಸಮ್ಮುಖದಲ್ಲಿ ಜೋಡಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥದ ವಿಧಿವಿಧಾನಗಳು ಸಂಪನ್ನಗೊಂಡವು.

- Advertisement -

Latest News

error: Content is protected !!