- Advertisement -
- Advertisement -
ಮಂಗಳೂರು: ಕೆಲಸಕ್ಕೆ ತೆರಳಿದ ಮಹಿಳೆಯೊಬ್ಬರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳೂರು ನಿವಾಸಿ ಅರ್ಚನಾ (35) ಕಾಣೆಯಾದ ಮಹಿಳೆ. ಇವರು ಸೆಪ್ಟೆಂಬರ್ 17ರಂದು ಎಂದಿನಂತೆ ಕೆಲಸಕ್ಕೆಂದು ತೆರಳಿದವರು ಮನೆಗೆ ಮರಳಿರಲಿಲ್ಲ. ಈಕೆ ರಾಘವೇಂದ್ರ (42) ಎಂಬವರೊಂದಿಗೆ ತೆರಳಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ವಿವರ:
- ಹೆಸರು: ಅರ್ಚನಾ (35 ವರ್ಷ)
- ಎತ್ತರ: 5 ಅಡಿ
- ಮೈಬಣ್ಣ ಹಾಗೂ ದೇಹಯಷ್ಟಿ: ಬಿಳಿ ಮೈಬಣ್ಣ, ದಪ್ಪ ಶರೀರ, ದುಂಡು ಮುಖ
- ಉಡುಪು: ಕಾಣೆಯಾದ ದಿನ ಬಿಳಿ ಬಣ್ಣದ ಚುಕ್ಕೆಗಳಿರುವ ಚೂಡಿದಾರ್ ಧರಿಸಿದ್ದರು
- ಮಾತನಾಡುವ ಭಾಷೆ: ಕನ್ನಡ ಮತ್ತು ತುಳು
ಕಾಣೆಯಾಗಿರುವ ಅರ್ಚನಾ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ಕೂಡಲೇ ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ.
- Advertisement -


