- Advertisement -
- Advertisement -
ಮಾಣಿ: ಯಕ್ಷಗಾನ ಸಮಿತಿ ಮಾಣಿ ಇದರ ಆಶ್ರಯದಲ್ಲಿ 43ನೇ ವರ್ಷದ ತಾಳಮದ್ದಳೆ ಕೂಟವು ಅಕ್ಟೋಬರ್ 25ರ ಭಾನುವಾರ ಮಧ್ಯಾಹ್ನ 2:00 ಗಂಟೆಗೆ ಮಾಣಿಯ ಕರ್ನಾಟಕ ಪ್ರೌಢಶಾಲೆಯಲ್ಲಿ (ಮಾಣಿ–ಉಪ್ಪಿನಂಗಡಿ ಸರ್ವಿಸ್ ರಸ್ತೆ) ನಡೆಯಲಿದೆ.
ಈ ಬಾರಿಯ ಕೂಟದಲ್ಲಿ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಶಿವಭಕ್ತ ವೀರಮಣಿ’ ಯಕ್ಷಗಾನ ಪ್ರಸಂಗ ಪ್ರದರ್ಶನವಾಗಲಿದೆ.
ಕಲಾವಿದರ ವಿವರ:
- ಹಿಮ್ಮೇಳದಲ್ಲಿ: ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಜಗನ್ನಿವಾಸ ರಾವ್ ಪುತ್ತೂರು, ಶ್ರೀ ಚೈತನ್ಯಕೃಷ್ಣ ಪದ್ಯಾಣ ಹಾಗೂ ಶ್ರೀ ರಾಜೇಂದ್ರಕೃಷ್ಣ ಪಂಚಿಗದ್ದೆ ಭಾಗವಹಿಸಲಿದ್ದಾರೆ.
- ಮುಮ್ಮೇಳದಲ್ಲಿ: ಈಶ್ವರನಾಗಿ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್, ಶತ್ರುಘ್ನನಾಗಿ ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವೀರಮಣಿಯಾಗಿ ಶ್ರೀ ಸಂಕದಗಂಡಿ ಗಣಪತಿ ಭಟ್ ಹಾಗೂ ಹನುಮಂತನಾಗಿ ಶ್ರೀ ಪವನ್ ಕಿರಣ್ ಕೆರೆ ಬಣ್ಣಹಚ್ಚಲಿದ್ದಾರೆ.
ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಯೋಜಕರು ವಿನಂತಿಸಿದ್ದಾರೆ.
- Advertisement -


