Friday, June 5, 2026
Homeಕರಾವಳಿಬೆಳ್ತಂಗಡಿ : ಬದುಕು ಕಟ್ಟೋಣ ತಂಡದಿಂದ ಕೊಳಂಬೆಯಲ್ಲಿ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ : ಬದುಕು ಕಟ್ಟೋಣ ತಂಡದಿಂದ ಕೊಳಂಬೆಯಲ್ಲಿ ಸ್ವಾತಂತ್ರ್ಯೋತ್ಸವ

- Advertisement -
- Advertisement -

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ 2019ರ ಆ.9 ರಂದು ಭೀಕರ ಪ್ರವಾಹಕ್ಕೆ ಮನೆ ಹಾಗೂ ಕೃಷಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಈ ಹಿನ್ನಲೆಯಲ್ಲಿ ಅಲ್ಲಿನ ಮನೆಗಳನ್ನು ಸ್ವಚ್ಚಗೊಳಿಸಿ ಗೃಹ ಪ್ರವೇಶ ಮಾಡಲಾಗಿತ್ತು. ನಂತರ ಕೃಷಿ ಜಾಗದಲ್ಲಿ ತುಂಬಿದ್ದ ಹೂಳನ್ನು ತೆಗೆದು ಭತ್ತದ ಕೃಷಿ ನಾಟಿ ಮಾಡುವುದರೊಂದಿಗೆ ಬದುಕು ಕಟ್ಟೋಣ ತಂಡದ ವತಿಯಿಂದ ಸ್ವಾತಂತ್ರ್ಸೋತ್ಸವವನ್ನು ಆಚರಿಸಲಾಯಿತು.


ಆ ನೆನಪಿಗಾಗಿ ಇಂದು ಅದೇ ಸ್ಥಳದಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಯಕರ್ತರಿಂದ 40 ಎಕ್ರೆ ಜಾಗದಲ್ಲಿ ಭತ್ತದ ನಾಟಿ ಕೃಷಿ ಮಾಡಿ ಫಲಾನುಭವಿಗಳಿಗೆ ಹಸ್ತಾಂತರ ಕಾರ್ಯ ನಡೆಯಿತು.

ಧ್ವಜರಾಹೋಣವನ್ನು ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಭಜರಂಗ ದಳದ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ ಉಪಸ್ಥಿತರಿದ್ದು ಶುಭ ಕೋರಿದರು.

ಈ ಸಂದರ್ಭದಲ್ಲಿ ಬದುಕು ಕಟ್ಟೋಣ ತಂಡದ ಸಂಯೋಜಕರಾದ ಲಕ್ಷ್ಮೀ ಗ್ರೂಪ್ ನ ಮಾಲಕ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ ನ ಮಾಲಕ ರಾಜೇಶ್ ಪೈ, ಶರತ್ ಪಡ್ವೇಟ್ನಾಯ, ಯತೀಶ್‌ ಪೊದುವಳ್, ಅರವಿಂದ ಕಾರಂತ್ ಉಜಿರೆ ,ಉದ್ಯಮಿ ರವಿ ಚಕ್ಕಿತ್ತಾಯ , ಗೋಪಾಲ್ ಕೃಷ್ಣ, ಉದ್ಯಮಿ ಅಪ್ರಮೇಯ ಪ್ರಕಾಶ್ ಗೌಡ, ದೇವಪ್ಪ ಸಾಯಿಕೃಪಾ ,ಪ್ರಭಾಕರ ಜೈನ್ , ಪ್ರಶಾಂತ್, ಶಶಿಧರ್ ಕಲ್ಮಂಜ, ಶ್ರೀಧರ್ ಮರಕಡ, ಮೋಹನ್ ಶೆಟ್ಟಿಗಾರ್, ಶ್ರೀಧರ್ ಕಲ್ಮಂಜ , ರಾಘವೇಂದ್ರ ಕಲ್ಮಂಜ, ಯೋಗೀಶ್ ಕುಲಪಳ ಹಾಗೂ ಕೊಲಂಬೆಯ ಗ್ರಾಮಸ್ಥರು ಉಪಸ್ಥಿತರಿದ್ದರು. ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು

- Advertisement -

Latest News

error: Content is protected !!