Thursday, October 22, 2026
Homeಪ್ರಮುಖ-ಸುದ್ದಿಪ್ರವಾಸಿ ತಾಣ ಯಾಣಕ್ಕೆ ಶುಲ್ಕ ನಿಗದಿಸಿದ ಅರಣ್ಯ ಸಮಿತಿ!

ಪ್ರವಾಸಿ ತಾಣ ಯಾಣಕ್ಕೆ ಶುಲ್ಕ ನಿಗದಿಸಿದ ಅರಣ್ಯ ಸಮಿತಿ!

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದೀಗ ಶುಲ್ಕ ವಿಧಿಸಲಾಗುತ್ತಿದೆ. 

ಭಾರತೀಯ ಭೂವೈಜ್ಞಾನಿಕ ಸಂಸ್ಥೆಯು ಯಾಣವನ್ನು ರಾಷ್ಟ್ರೀಯ ಭೂಪಾರಂಪರಿಕ ತಾಣವೆಂದು ಘೋಷಿಸಿದ ಬೆನ್ನಲ್ಲೇ, ಇಲ್ಲಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಹಾಗೂ ನೀರಿನ ಬಾಟಲಿಗೆ ಠೇವಣಿ ಹಣ ನಿಗದಿಪಡಿಸಲಾಗಿದೆ.

ಅರಣ್ಯ ಸಮಿತಿಯು ಪ್ರತಿ ಪ್ರವಾಸಿಗರಿಂದ ₹10 ಪ್ರವೇಶ ಶುಲ್ಕ ಪಡೆಯುತ್ತಿದೆ. ಅಲ್ಲದೆ, ವಿಭೂತಿ ಫಾಲ್ಸ್‌ ಹಾಗೂ ಕತಗಾಲ್ ಮಾರ್ಗವಾಗಿ ಯಾಣಕ್ಕೆ ತೆರಳುವ ಪ್ರವಾಸಿಗರು ನೀರಿನ ಬಾಟಲಿಗೆ ₹100 ಠೇವಣಿ ಪಾವತಿಸಬೇಕಾಗಿದೆ. ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಮೇಲಧಿಕಾರಿಗಳ ಸೂಚನೆಯಂತೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ಶುಲ್ಕದ ಕ್ರಮಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಗೆ ನಿಷೇಧವಿದ್ದರೂ, ಪ್ರವಾಸಿಗರು ಬಾಟಲಿ ತಂದರೆ ಅದಕ್ಕೂ ₹100 ಠೇವಣಿ ಪಾವತಿಸಬೇಕಾಗಿದೆ. ₹20 ಮೌಲ್ಯದ ನೀರಿನ ಬಾಟಲಿಗೆ ₹100 ಠೇವಣಿ ನೀಡಬೇಕಾದ ಪರಿಸ್ಥಿತಿ ಉಂಟಾಗಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ದಾಂಡೇಲಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಇದೇ ರೀತಿಯ ಶುಲ್ಕ ವಿಧಿಸದಿರುವಾಗ, ಯಾಣದಲ್ಲಿ ಮಾತ್ರ ಏಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

- Advertisement -

Latest News

error: Content is protected !!