Thursday, June 4, 2026
Homeಕರಾವಳಿಪಂಜದಲ್ಲಿ 74ನೇ ಸ್ವಾತಂತ್ಯ ದಿನಾಚರಣೆಯ ಸಂಭ್ರಮ

ಪಂಜದಲ್ಲಿ 74ನೇ ಸ್ವಾತಂತ್ಯ ದಿನಾಚರಣೆಯ ಸಂಭ್ರಮ

- Advertisement -
- Advertisement -

ಪಂಜ : ಇಂದು ದೇಶದೆಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಕೊರೋನಾ ಭಯದಲ್ಲಿ ಜನ ಸರಳವಾಗಿ ಸ್ವಾತ್ರಂತ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಇನ್ನು ಜೇಸಿಐ ಪಂಜ ಪಂಚಶ್ರೀ,  ಗ್ರಾಮ ಪಂಚಾಯತ್ ಪಂಜ, ಬಿ.ಯಂ.ಎಸ್ ರಿಕ್ಷಾ ಚಾಲಕ ಮಾಲಕರ ಸಂಘ (ರಿ) ಪಂಜ,  ಪಂಜ ಪರಿಸರದ ವರ್ತಕರು, ಭಾರತ ಸೈಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.  

ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ  ಡಾ.ದೇವಿಪ್ರಸಾದ್ ಕಾನತ್ತೂರು ಧ್ವಜಾರೋಹಣವನ್ನು ನೆರವೇರಿಸಿದರು. ಧ್ವಜಾರೋಹಣದ ಬಳಿಕ  ಪಂಜ  ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು‌. ಮುಖ್ಯ ಭಾಷಣಕಾರರಾಗಿ ಜೇಸಿ ಹರ್ಷಿತ್ ಪಡ್ರೆ ವಲಯಾಧಿಕಾರಿ, ವಲಯ 15 ಜೇಸಿ ಭಾರತ್ ಇವರು ಭಾಗವಹಿಸಿದ್ದರು‌. ವೇದಿಕೆಯಲ್ಲಿ ಶ್ರೀ ಮಣಿಯಾನ ಪುರುಷೋತ್ತಮ ಅಭಿವೃದ್ಧಿ ಅಧಿಕಾರಿಗಳು , ಗ್ರಾಮ ಪಂಚಾಯತ್ ಪಂಜ, ಶ್ರೀ ಲಕ್ಷ್ಮೀನಾರಾಯಣ ಹೆಕ್ಕಿಲ ಅಧ್ಯಕ್ಷರು , ಬಿ.ಯಂ.ಎಸ್ , ಘಟಕ  ಪಂಜ,  ಶ್ರೀ ಮೇದಪ್ಪ ವರ್ತಕರು , ಶುಭಲಕ್ಷ್ಮೀ ಸ್ಟೋರ್ ಪಂಜ, ಉದ್ಯಮಿ ದೇವಿಪ್ರಸಾದ್ ಜಾಕೆ, ಜೇಸಿ ಅಧ್ಯಕ್ಷರಾದ ನಾಗಮಣಿ ಕೆದಿಲ, ವಾಸುದೇವ ಮೇಲ್ಪಾಡಿ ಸೇರಿದಂತೆ ಕೆಲ ಗಣ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!