Wednesday, October 21, 2026
HomeWorldರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಮ್ ಖಾತೆ ಮತ್ತೆ ನಿರ್ಬಂಧ

ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಮ್ ಖಾತೆ ಮತ್ತೆ ನಿರ್ಬಂಧ

- Advertisement -
- Advertisement -

ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ಮಂಗಳವಾರ ಮತ್ತೊಮ್ಮೆ ನಿರ್ಬಂಧಿಸಲಾಗಿದೆ. ಕಳೆದ ಮೂರು ವಾರಗಳಲ್ಲಿ ಅವರ ಖಾತೆಯ ಮೇಲೆ ನಿರ್ಬಂಧ ವಿಧಿಸಿರುವುದು ಇದು ಎರಡನೇ ಬಾರಿ.

ಖಾತೆಯನ್ನು ತೆರೆಯಲು ಪ್ರಯತ್ನಿಸಿದಾಗ, ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಗಳ ಅಡಿಯಲ್ಲಿ ಕಾನೂನುಬದ್ಧ ಅವಶ್ಯಕತೆಗಳ ಹಿನ್ನೆಲೆಯಲ್ಲಿ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂಬ ಸಂದೇಶ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಆಚಾರ್ಯ ಅವರ ಖಾತೆಯನ್ನು ನಿರ್ಬಂಧಿಸಲು ಸರ್ಕಾರ ಯಾವ ಕಾರಣಕ್ಕೆ ಆದೇಶಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ನಿರ್ಬಂಧದ ಸ್ಕ್ರೀನ್‌ಶಾಟ್‌ ಅನ್ನು ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಕ್ರಮವನ್ನು ವ್ಯಂಗ್ಯವಾಗಿ ಟೀಕಿಸಿರುವ ಆಚಾರ್ಯ, “ಸಾಹೇಬರೇ, ಜನರು ನಿಮ್ಮನ್ನು ಅಚ್ಛೇ ದಿನ್ ತರಲೆಂದು ಆಯ್ಕೆ ಮಾಡಿದ್ದಾರೆ. ಆದರೆ ನೀವು ನಿಮ್ಮ ಅಧಿಕಾರಾವಧಿಯನ್ನು ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸುವುದರಲ್ಲಿ ವ್ಯರ್ಥ ಮಾಡುತ್ತಿದ್ದೀರಿ!” ಎಂದು ಬರೆದಿದ್ದಾರೆ.

- Advertisement -

Latest News

error: Content is protected !!