Wednesday, October 21, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕನ್ಯಾಡಿ ಶಾಲೆಯ 'ಬಾಲವನ'ಕ್ಕೆ 'ಯುವ ಫ್ರೆಂಡ್ಸ್' ವತಿಯಿಂದ ₹10,000 ಧನಸಹಾಯ

ಬೆಳ್ತಂಗಡಿ: ಕನ್ಯಾಡಿ ಶಾಲೆಯ ‘ಬಾಲವನ’ಕ್ಕೆ ‘ಯುವ ಫ್ರೆಂಡ್ಸ್’ ವತಿಯಿಂದ ₹10,000 ಧನಸಹಾಯ

- Advertisement -
- Advertisement -

ಬೆಳ್ತಂಗಡಿ: ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -ll ಧರ್ಮಸ್ಥಳ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳ “ಯುವ ಫ್ರೆಂಡ್ಸ್ ಕನ್ಯಾಡಿ “ವತಿಯಿಂದ ಆಯೋಜಿಸಲಾದ ಶ್ರೀ ಶಾರದಾಂಬ ಟ್ರೋಫಿ 2K26 ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಸಿ , ಉಳಿದ ಮೊತ್ತದಲ್ಲಿ ₹10,000/-  ಗಳನ್ನು  ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ “ಬಾಲವನ”ದಲ್ಲಿ  ಮಕ್ಕಳ ಮನರಂಜನೆಗಾಗಿ ಅಗತ್ಯವಿರುವ ಹೊರಾಂಗಣ ಆಟದ ಸಾಮಗ್ರಿಗಳನ್ನು ಅಳವಡಿಸಲು ಈ ಮೊತ್ತವನ್ನು  ” 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ” ಕಾರ್ಯಕ್ರಮದಲ್ಲಿ ಯುವ ಫ್ರೆಂಡ್ಸ್ ಕನ್ಯಾಡಿ ಅಧ್ಯಕ್ಷರು /ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಜೊತೆಗೂಡಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಇವರಿಗೆ ಹಸ್ತಾಂತರ ಮಾಡಿದರು .

ಮಕ್ಕಳ ಮುಖದಲ್ಲಿ ನಗು ಮೂಡಿಸುವ,  ಶಾಲೆಯ ಅಭಿವೃದ್ಧಿಗೆ ನೆರವಾಗುವ ಸದುದ್ದೇಶದಿಂದ ಯುವ ಫ್ರೆಂಡ್ಸ್ ಕನ್ಯಾಡಿ ಈ  ಸಮಾಜಮುಖಿ ಕಾರ್ಯವನ್ನು ಕೈಗೊಂಡಿರುವುದು ನಮಗೆಲ್ಲ ಬಹಳ ಹೆಮ್ಮೆಯ ವಿಷಯವಾಗಿದೆ. ಇನ್ನಷ್ಟು  ಸಮಾಜಮುಖಿ ಸೇವೆಗಳು ಇವರ ತಂಡದ ವತಿಯಿಂದ ನಡೆಯಲು ಆ ಭಗವಂತ ಶಕ್ತಿಯನ್ನು ತುಂಬಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳೊಂದಿಗೆ ಶಾಲಾ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪೋಷಕ ಮತ್ತು ವಿದ್ಯಾರ್ಥಿ ವೃಂದದ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

- Advertisement -

Latest News

error: Content is protected !!