Monday, October 19, 2026
Homeಅಪರಾಧಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ

- Advertisement -
- Advertisement -

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಈ ಸಂಬಂಧ ಮೂವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ವಿಚಾರಣಾಧೀನ ವಿದೇಶಿ ಮಹಿಳಾ ಕೈದಿಯೊಬ್ಬರ ಬಳಿ ₹11,500 ಪತ್ತೆಯಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಿ ವಾಪಸ್ ಜೈಲಿಗೆ ಕರೆತಂದಾಗ ಮುಖ್ಯ ದ್ವಾರದಲ್ಲಿ ನಡೆಸಿದ ತಪಾಸಣೆ ವೇಳೆ ಹಣ ಪತ್ತೆಯಾಗಿದೆ.

ಇನ್ನೊಂದು ಪ್ರಕರಣದಲ್ಲಿ ಸಜಾಬಂಧಿ ಮಾಲತೇಶ್ ಇದ್ದ ಬ್ಯಾರಕ್‌ನ ಕೊಠಡಿಯಲ್ಲಿ ಒಂದು ಮೊಬೈಲ್ ಹಾಗೂ ಸಿಮ್ ಕಾರ್ಡ್ ಪತ್ತೆಯಾಗಿವೆ. ಮತ್ತೊಂದು ಬ್ಯಾರಕ್‌ನಲ್ಲಿ ಮೊಹಮ್ಮದ್ ನವಾಜ್ ಎಂಬಾತ ಟೋಪಿಯೊಳಗೆ ಬಚ್ಚಿಟ್ಟಿದ್ದ ಒಂದು ಮೊಬೈಲ್ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಿಷೇಧಿತ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು ಮತ್ತು ಅವುಗಳನ್ನು ಪೂರೈಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!