Friday, June 5, 2026
Homeಪ್ರಮುಖ-ಸುದ್ದಿಸ್ವಾತ್ರಂತ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿಯಿಂದ ಗುಡ್ ನ್ಯೂಸ್..

ಸ್ವಾತ್ರಂತ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿಯಿಂದ ಗುಡ್ ನ್ಯೂಸ್..

- Advertisement -
- Advertisement -

ನವದೆಹಲಿ : ಇಂದು ದೇಶದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು.

ದೇಶಾದ್ಯಂತ ಕೊರೋನಾ ಮುಂದುವರೆಯುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡಿದ ಕೊರೋನಾ ಯೋಧರಿಗೆ ಪ್ರಧಾನಿ ಮೋದಿ ಮೊದಲಿಗೆ ನಮನ ಸಲ್ಲಿಸಿದರು.

ಇನ್ನು ಕೊರೋನಾ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ದೇಶದಲ್ಲಿ ಮೂರು ಕೊರೋನಾ ವಾಕ್ಸಿನ್ ತಯಾರಾಗುತ್ತಿದೆ. ಇದು ಸದ್ಯಕ್ಕೆ ಹಲವು ಹಂತಗಳಲ್ಲಿ ಪ್ರಯೋಗ ನಡೆಯುತ್ತಿದೆ. ವಿಜ್ಞಾನಿಗಳು, ವೈದ್ಯರು ಸಾಧು ಸಂತರಂತೆ ಶ್ರದ್ಧೆ ನಿಷ್ಠೆಯಿಂದ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುತ್ತಿದ್ದಾರೆ ಎಂದರು.

ಕರೋನವೈರಸ್ ಲಸಿಕೆ ಕುರಿತು ಪಿಎಂ ಮೋದಿ ಅವರು ಭಾರತದಲ್ಲಿ ಮೂರು ಸಂಭಾವ್ಯ ಲಸಿಕೆ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ ಎಂದು ಹೇಳಿದರು. “ಪರೀಕ್ಷೆಗಳು ಪೂರ್ಣಗೊಂಡ ತಕ್ಷಣ, ಅದರ ಉತ್ಪಾದನೆ ಮತ್ತು ಕಡಿಮೆ ಸಮಯದಲ್ಲಿ ಸಾರ್ವಜನಿಕರಿಗೆ ತಲುಪಿಸುವ ಸಂಪೂರ್ಣ ಮಾರ್ಗಸೂಚಿ ಸಿದ್ಧವಾಗಿದೆ” ಎಂದು ಪಿಎಂ ಮೋದಿ ಹೇಳಿದರು.

- Advertisement -

Latest News

error: Content is protected !!