Sunday, October 18, 2026
Homeಕರಾವಳಿಮಂಗಳೂರುಲೋಕಭವನದಲ್ಲಿ ರಾಜ್ಯಪಾಲರಿಂದ ಕನ್ಯಾಪೂಜೆ

ಲೋಕಭವನದಲ್ಲಿ ರಾಜ್ಯಪಾಲರಿಂದ ಕನ್ಯಾಪೂಜೆ

- Advertisement -
- Advertisement -

ಬೆಂಗಳೂರು: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಲೋಕಭವನದಲ್ಲಿ ಕನ್ಯಾ ಪೂಜೆ ನೆರವೇರಿಸಿದರು.

ಬೆಂಗಳೂರಿನ ಗಾಂಧಿನಗರದ ನಾಗಮ್ಮನಗರ ಕೊಳಗೇರಿ ಪ್ರದೇಶದ ಬಾಲಕಿಯರನ್ನು ಲೋಕಭವನಕ್ಕೆ ಆಹ್ವಾನಿಸಿದ್ದ ರಾಜ್ಯಪಾಲರು, ಸಾಂಪ್ರದಾಯಿಕವಾಗಿ ಕನ್ಯಾಪೂಜೆ ನೆರವೇರಿಸಿ, ಬಾಲಕಿಯರ ಹಣೆಗೆ ತಿಲಕವಿಟ್ಟು ಪೂಜಾ ವಿಧಿ ವಿಧಾನ‌ ನಡೆಸಿ ಮಕ್ಕಳೊಂದಿಗೆ ಭೋಜನ ಸ್ವೀಕರಿಸಿದರು.

ಇದೇ ವೇಳೆ ಭಾಗವಹಿಸಿದ್ದ ಮಕ್ಕಳಿಗೆ ಶಾಲಾ ಬ್ಯಾಗ್‌ಗಳು, ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ಡಾ. ಸುಧಾ ಯಾದವ್ ಉಡುಗೊರೆಯಾಗಿ ನೀಡಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಇಂಜಿನಿಯರ್ ಹಾಗೂ ರಾಜ್ಯಪಾಲರ ಆಪ್ತ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!