- Advertisement -
- Advertisement -
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಕಲಿ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಇಲಾಖೆ ಹಾಗೂ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. “ನನ್ನ ಕಾರ್ಯಕರ್ತರನ್ನು ಅರಸ್ಟ್ ಮಾಡುತ್ತೀರಾ? ತಾಕತ್ತಿದ್ದರೆ ನಾನೇ ನಿಮ್ಮ ಕಚೇರಿಗೆ ಬರುತ್ತೇನೆ, ನನ್ನನ್ನು ಅರೆಸ್ಟ್ ಮಾಡಿ” ಎಂದು ಸವಾಲು ಹಾಕಿದರು. ಸಿಎಂ ಒಬ್ಬರನ್ನು ಟ್ರ್ಯಾಪ್ ಮಾಡಿಸಲಾಗಿದೆ ಎಂದು ಕಿಡಿಕಾರಿದ ಅವರು, ತರಾತುರಿಯಲ್ಲಿ ಬಳಸಿದ ಕೆಲವು ಪದಗಳಿಗೆ ಜನರಲ್ಲಿ ಕ್ಷಮೆ ಕೋರಿದರು.
- Advertisement -


