- Advertisement -
- Advertisement -
ನವದೆಹಲಿ: ನಾಲ್ಕು ವರ್ಷಗಳ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ದರ ಏರಿಕೆ ಮಾಡಿದೆ. ರೆಪೋ ದರ ಶೇಕಡಾ 0.25 ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇಕಡಾ 5.50ಕ್ಕೆ ಏರಿಕೆಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸ ನೀತಿ ಸಮಿತಿ ನಾಲ್ಕು ವರ್ಷಗಳ ಬಳಿಕ ದರ ಹೆಚ್ಚಳ ಮಾಡಿದೆ. ಕಚ್ಛಾ ತೈಲ ಬೆಲೆ ಏರಿಕೆ, ಜಾಗತಿಕ ರಾಜಕೀಯ ಸ್ಥಿತಿಗತಿ ಮತ್ತು ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ನಿರ್ಧಾರದಿಂದಾಗಿ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲಿನ ಇಎಂಐ ಮೊತ್ತ ಹೆಚ್ಚಳವಾಗುವ ಸಾಧ್ಯತೆ ಇದೆ.ರೆಪೋ ದರ ಏರಿಕೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಬಡ್ಡಿ ದರ ಕಡಿತ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
- Advertisement -


