- Advertisement -
- Advertisement -
ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ ಅಡಿಕೆ ಗೋಡೌನ್ನಿಂದ ಸುಮಾರು ₹95,000 ಮೌಲ್ಯದ 2 ಕ್ವಿಂಟಾಲ್ ಸಿಪ್ಪೆ ಸುಲಿದ ಅಡಿಕೆ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಿಯ್ಯಾರು ಗ್ರಾಮದ ‘ಮಣಿಕಂಠ ಕೃಪಾ’ ನಿವಾಸಿ ಎಸ್. ರಮೇಶ್ ಶೆಟ್ಟಿ (76) ನೀಡಿದ ದೂರಿನ ಆಧಾರದಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಡೌನ್ನಲ್ಲಿ ಕೆಲಸ ಮಾಡುತ್ತಿದ್ದ ಗಣಪತಿ ಮತ್ತು ಮಂಜುಳಾ ಅವರು ಆ.20ರಿಂದ ಸೆ.28ರ ಅವಧಿಯಲ್ಲಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -


