Wednesday, October 7, 2026
Homeಕರಾವಳಿಸುರತ್ಕಲ್‌ ಎನ್‌ಐಟಿಕೆಯಲ್ಲಿ ಭಾರತೀಯ ವಾಯುಪಡೆಯ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಭಾರತೀಯ ವಾಯುಪಡೆಯ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ

- Advertisement -
- Advertisement -

ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಭಾರತೀಯ ವಾಯುಪಡೆಯ ನಿವೃತ್ತ ಮಿಗ್-21 ತರಬೇತಿ ಯುದ್ಧ ವಿಮಾನವನ್ನು ಮಂಗಳವಾರ ಅಧಿಕೃತವಾಗಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್‌ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಂ. ಮುರುಗಪ್ಪನ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಉಪಸ್ಥಿತರಿದ್ದರು. ನಿವೃತ್ತ ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ ಅವರು ಮಿಗ್-21 ವಿಮಾನದ ವೈಶಿಷ್ಟ್ಯಗಳು ಹಾಗೂ ಸೇವಾ ಇತಿಹಾಸದ ಕುರಿತು ಮಾಹಿತಿ ನೀಡಿದರು.

ಮಿಗ್-21ರ ಪ್ರಮುಖ ವೈಶಿಷ್ಟ್ಯಗಳು:
ಎರಡು ಆಸನಗಳ ಟ್ಯಾಂಡಂ ಕಾಕ್‌ಪಿಟ್ ಹೊಂದಿರುವ ಈ ತರಬೇತಿ ಆವೃತ್ತಿಯ ವಿಮಾನದಲ್ಲಿ ಆರ್-13 ಟರ್ಬೋಜೆಟ್ ಎಂಜಿನ್ ಅಳವಡಿಸಲಾಗಿದೆ. ಡೆಲ್ಟಾ ಆಕಾರದ ರೆಕ್ಕೆಗಳು ವಿಮಾನಕ್ಕೆ ಚುರುಕುತನ ಹಾಗೂ ಸ್ಥಿರತೆ ನೀಡುತ್ತವೆ. ಹೊರಾಂಗಣ ಗನ್ ಪಾಡ್ ಮತ್ತು ರೆಕ್ಕೆಗಳ ಕೆಳಭಾಗದಲ್ಲಿ ಬಾಂಬ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಇದು ಹೊಂದಿತ್ತು.

ಭಾರತೀಯ ವಾಯುಪಡೆಯು ಬಳಸಿದ 100ಕ್ಕೂ ಅಧಿಕ ತರಬೇತಿ ವಿಮಾನಗಳಲ್ಲಿ ಮಿಗ್-21 ಕೂಡ ಒಂದಾಗಿದ್ದು, ಸೆಪ್ಟೆಂಬರ್ 2025ರವರೆಗೆ ಸಕ್ರಿಯ ಸೇವೆಯಲ್ಲಿತ್ತು.

- Advertisement -

Latest News

error: Content is protected !!