Tuesday, October 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಮಕ್ಕಳು ಜಲಸಮಾಧಿ!

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಮಕ್ಕಳು ಜಲಸಮಾಧಿ!

- Advertisement -
- Advertisement -

ಚಿಕ್ಕಮಗಳೂರು: ಶಾಲೆಗೆ ರಜೆ ಇದ್ದ ಕಾರಣ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಮರ್ಲೆ ಗ್ರಾಮದ ಚಿಕ್ಕ ಕೆರೆಯಲ್ಲಿ ನಡೆದಿದೆ.

ಮೃತರನ್ನು 12 ವರ್ಷದ 6ನೇ ತರಗತಿಯ ವಿದ್ಯಾರ್ಥಿಗಳಾದ ತರುಣ್, ಭುವನ್ ಹಾಗೂ ಲಿಖಿತ್ ಎಂದು ಗುರುತಿಸಲಾಗಿದೆ.

ರಜೆ ಇದ್ದಿದ್ದರಿಂದ ಮಕ್ಕಳು ಈಜಾಡಲು ಕೆರೆಗೆ ತೆರಳಿದ್ದರು. ಈ ವೇಳೆ ಕೆರೆಯಲ್ಲಿದ್ದ ಆಳವಾದ ಗುಂಡಿಗೆ ಇಳಿದ ಪರಿಣಾಮ ಈಜಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಗ್ರಾಮದ ಮೂವರು ಬಾಲಕರು ದುರಂತವಾಗಿ ಕೊನೆಯುಸಿರೆಳೆದಿರುವುದು ಸ್ಥಳೀಯರಲ್ಲಿ ತೀವ್ರ ಶೋಕ ತಂದೊಡ್ಡಿದೆ.

- Advertisement -

Latest News

error: Content is protected !!