Monday, September 21, 2026
Homeಕರಾವಳಿಮಂಗಳೂರುಬಂಟ್ವಾಳದಲ್ಲಿ ವೈಯಕ್ತಿಕ ದ್ವೇಷಕ್ಕೆ ಚೂರಿ ಇರಿತ

ಬಂಟ್ವಾಳದಲ್ಲಿ ವೈಯಕ್ತಿಕ ದ್ವೇಷಕ್ಕೆ ಚೂರಿ ಇರಿತ

- Advertisement -
- Advertisement -

ಬಂಟ್ವಾಳ: ತಾಲೂಕಿನ ಧನುಪೂಜೆ ಸಮೀಪದ ಕಮ್ಮಾಜೆಯಲ್ಲಿ ರವಿವಾರ ವ್ಯಕ್ತಿಯೋರ್ವರ ಮೇಲೆ ಚೂರಿ ಇರಿತ ನಡೆದಿದೆ.

ಮೇಸ್ತ್ರಿ ಪ್ರಶಾಂತ್ ಎಂಬವರಿಗೆ ಕಮ್ಮಾಜೆಯ ಮೂಡಾಯಿಕೋಡಿ ನಿವಾಸಿ ಪ್ರಶಾಂತ್ ಎಂಬಾತ ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೇಸ್ತ್ರಿ ಪ್ರಶಾಂತ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

- Advertisement -

Latest News

error: Content is protected !!