Thursday, September 3, 2026
Homeಕರಾವಳಿಗಂಗೊಳ್ಳಿ ಅಳಿವೆ ಬಳಿ ಬೋಟ್ ಮುಳುಗಡೆ: 6 ಮೀನುಗಾರರ ರಕ್ಷಣೆ

ಗಂಗೊಳ್ಳಿ ಅಳಿವೆ ಬಳಿ ಬೋಟ್ ಮುಳುಗಡೆ: 6 ಮೀನುಗಾರರ ರಕ್ಷಣೆ

- Advertisement -
- Advertisement -

ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮೀನುಗಾರಿಕಾ ಬೋಟ್‌ವೊಂದು ಬುಧವಾರ ಮುಳುಗಡೆಯಾಗಿದ್ದು, ಅದಷ್ಟೂ ೬ ಮಂದಿ ಮೀನುಗಾರರನ್ನು ತಕ್ಷಣವೇ ರಕ್ಷಿಸಲಾಗಿದೆ. ಬಳಿಕ ಮುಳುಗಿದ ಬೋಟ್ ಅನ್ನು ಯಶಸ್ವಿಯಾಗಿ ದಡಕ್ಕೆ ತರಲಾಯಿತು.

ಕಳೆದ ವಾರವಷ್ಟೇ ಇದೇ ಗಂಗೊಳ್ಳಿ ಅಳಿವೆ ಬಳಿ ಭಾರೀ ಅಲೆಗಳಿಗೆ ಸಿಲುಕಿ ಮುಳುಗಿದ್ದ ಬೋಟ್‌ನಲ್ಲಿದ್ದ ೨೭ ಮಂದಿ ಮೀನುಗಾರರನ್ನು ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿತ್ತು.

ಆ ಘಟನೆ ಮಾಸುವ ಮುನ್ನವೇ ಬುಧವಾರ ಮತ್ತೊಂದು ಬೋಟ್ ಅಪಾಯಕ್ಕೆ ಸಿಲುಕಿರುವುದು ಸ್ಥಳೀಯ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದ್ದು, ಈ ಭಾಗದಲ್ಲಿ ಪದೇಪದೆ ನಡೆಯುತ್ತಿರುವ ದುರಂತಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!