Monday, August 31, 2026
Homeಕರಾವಳಿತಕ್ಷಣವೇ ಸಚಿವ ಸಂಪುಟದಿಂದ ಬಸವರಾಜ ರಾಯರೆಡ್ಡಿ ಅವರನ್ನು ವಜಾಗೊಳಿಸಿ; ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ಶಾಸಕ...

ತಕ್ಷಣವೇ ಸಚಿವ ಸಂಪುಟದಿಂದ ಬಸವರಾಜ ರಾಯರೆಡ್ಡಿ ಅವರನ್ನು ವಜಾಗೊಳಿಸಿ; ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ಆಕ್ರೋಶ

- Advertisement -
- Advertisement -

ಮಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಹಾಗೂ ಮಠ ಮಂದಿರಗಳಿಗೆ ಹೋಗಬಾರದು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯರೆಡ್ಡಿ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೊಟ್ಟೆಪಾಡಿಗಾಗಿ ಬಗೆಬಗೆಯ ವೇಷ ಎಂಬ ಗಾದೆ ಮಾತು ಕಾಂಗ್ರೆಸ್ ನಾಯಕರಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಗಮನ ಹರಿಸಬೇಕಾದ ಸಚಿವರು, ಕೇವಲ ಮತಬ್ಯಾಂಕ್‌ಗಾಗಿ ಸ್ವಧರ್ಮಕ್ಕಿಂತ ಪರಧರ್ಮವೇ ಶ್ರೇಷ್ಠ ಎಂದು ಹೇಳಿ ಎಲ್ಲ ಧರ್ಮಗಳಿಗೂ ಅವಮಾನ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಹಿಂದೂ ಧರ್ಮವೇ ನಿಮಗೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ನೀಡಿದೆ. ಮತಾಂತರವಾದರೆ ಹಿಂದೂಗಳು ಕೊಲ್ಲಲು ಬರುವುದಿಲ್ಲ, ಅಂತಹ ಸ್ವಾತಂತ್ರ್ಯವನ್ನೂ ಈ ಧರ್ಮ ಕೊಟ್ಟಿದೆ. ಹೀಗಿರುವಾಗ ಹಿಂದೂ ಧರ್ಮದಲ್ಲೇ ಹುಟ್ಟಿ ಇಸ್ಲಾಂ ಧರ್ಮ ಶ್ರೇಷ್ಠ ಎಂದು ಹೇಳಲು ನಿಮಗಿರುವ ಸಕಾರಣವೇನು?” ಎಂದು ಭರತ್ ಶೆಟ್ಟಿ ಸಚಿವ ರಾಯರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!