Friday, October 16, 2026
Homeಕರಾವಳಿಎಡಪದವಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ

ಎಡಪದವಿನಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ

- Advertisement -
- Advertisement -

ಮಂಗಳೂರು: ಕಳೆದ ಕೆಲವು ದಿನಗಳಿಂದ ಎಡಪದವಿನ ನಲ್ಯ ಸೀತಾಂಬೆಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಭಾನುವಾರ ಬಿದ್ದಿದೆ.

ಸ್ಥಳೀಯ ನಿವಾಸಿ ಲೋಕೇಶ್ ಎಂಬುವವರ ಸಾಕು ನಾಯಿಯನ್ನು ಶನಿವಾರ ರಾತ್ರಿ ಭೇಟೆಯಾಡಿ ಕೊಂದಿದ್ದ ಈ ಚಿರತೆ, ಈ ಮುಂಚೆಯೂ ಹಲವು ನಾಯಿಗಳು ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಚಿರತೆ ಹಾವಳಿಯಿಂದ ಭೀತಿಗೊಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು, ಚಿರತೆಯ ಚಲನವಲನವಿದ್ದ ಜಾಗದಲ್ಲಿ ಬೋನು ಅಳವಡಿಸಿದ್ದರು. ಪ್ರಸ್ತುತ ಚಿರತೆ ಸೆರೆಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

- Advertisement -

Latest News

error: Content is protected !!