Friday, October 16, 2026
Homeಕರಾವಳಿಹೊಸಬೆಟ್ಟು ಮೊಗವೀರ ಸಂಘದಿಂದ ವಿಶೇಷ ಸಮುದ್ರ ಪೂಜೆ

ಹೊಸಬೆಟ್ಟು ಮೊಗವೀರ ಸಂಘದಿಂದ ವಿಶೇಷ ಸಮುದ್ರ ಪೂಜೆ

- Advertisement -
- Advertisement -

ಸುರತ್ಕಲ್: ಹೊಸಬೆಟ್ಟು ಮೊಗವೀರ ಸಂಘ (ರಿ) ಅಭಿವೃದ್ಧಿಪಡಿಸಿದ ಶ್ರೀ ಲಕ್ಷ್ಮಿ ವೆಂಕಟೇಶ ಪ್ರಾರ್ಥನಾ ಮಂದಿರದಲ್ಲಿ ಗಣಪತಿ ಮಯ್ಯ ಅವರ ಪೌರೋಹಿತ್ಯದಲ್ಲಿ ಇತ್ತೀಚೆಗೆ ವಿಶೇಷ ಪೂಜೆ ಹಾಗೂ ಸಮುದ್ರ ಪೂಜೆ ಕಾರ್ಯಕ್ರಮ ನೆರವೇರಿತು.

ಈ ಶುಭ ಸಮಾರಂಭದಲ್ಲಿ ಗಂಗಾಧರ ಗುರಿಕಾರ, ಪುರಂದರ ಗುರಿಕಾರ, ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷ ಯೋಗೇಶ್ ಆರ್. ಕರ್ಕೆರ, ಉಪಾಧ್ಯಕ್ಷ ಚಂದ್ರಹಾಸ ಸುವರ್ಣ ಹಾಗೂ ಲಕ್ಷ್ಮೀ ವೆಂಕಟೇಶ ಪ್ರಾರ್ಥನಾ ಮಂದಿರದ ಅಧ್ಯಕ್ಷ ಉಮೇಶ್ ಪೂಜಾರಿ ಭಾಗವಹಿಸಿದ್ದರು.

ಇದರೊಂದಿಗೆ ಹೊಸಬೆಟ್ಟು ಮಹಿಳಾ ಸಮಾಜದ ಅಧ್ಯಕ್ಷೆ ಗಿರಿಜಾ ಎಸ್. ಸುವರ್ಣ, ಪ್ರಮುಖರಾದ ಜಗದೀಶ್ ಎನ್. ಕರ್ಕೇರ, ದಿನೇಶ್ ಕಾಂಚನ್, ನವೀನ್ ಕಾಂಚನ್, ಯಶೋಧರ ಕರ್ಕೇರ, ಪೂರ್ಣೇಶ್ ಮೆಂಡನ್, ರವಿ ಎನ್. ಶ್ರೀಯಾನ್, ಪ್ರವೀಣ್ ಸಾಲಿಯಾನ್, ಜನಾರ್ಧನ ಪೂಜಾರಿ, ಮೋಹನ್ ಪೂಜಾರಿ, ಹರಿಶ್ಚಂದ್ರ ಪೂಜಾರಿ, ಕರುಣಾಕರ ಪೂಜಾರಿ, ಮಧು ಎಸ್.ಕೆ., ಯಾದವೇಶ್ ಪುತ್ರನ್, ಮೋಹಿನಿ ರಾಮ ಕೋಟ್ಯಾನ್ ಮತ್ತು ಸುಜಾತ ಮೋಹನ್ ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!