Friday, August 21, 2026
Homeಪ್ರಮುಖ-ಸುದ್ದಿಶಿವರಾಜ್‌ ಕುಮಾರ್ ಅಭಿನಯದ ‘ಕೂರ್ಮಾವತಾರ್’ ಸಿನಿಮಾದ ಟೀಸರ್‌ ಬಿಡುಗಡೆ

ಶಿವರಾಜ್‌ ಕುಮಾರ್ ಅಭಿನಯದ ‘ಕೂರ್ಮಾವತಾರ್’ ಸಿನಿಮಾದ ಟೀಸರ್‌ ಬಿಡುಗಡೆ

- Advertisement -
- Advertisement -

ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಕೂರ್ಮಾವತಾರದ ಹಿನ್ನೆಲೆಯನ್ನು ಪ್ರಮುಖವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕೂರ್ಮಾವತಾರ್’.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಶಿವಣ್ಣನ ಹೊಸ ಲುಕ್ ಕಣ್ಣುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಬೃಹತ್ ಬಜೆಟ್ ಪ್ಯಾನ್-ಇಂಡಿಯಾ ಚಿತ್ರವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ‘ಪಂಚವಕ್ತ್ರ ಪಿಕ್ಚರ್ಸ್’ ಮತ್ತು ‘ರುಕ್ವಿನಾ ಸ್ಟುಡಿಯೋಸ್’ ಜಂಟಿ ಬ್ಯಾನರ್‌ಗಳ ಅಡಿಯಲ್ಲಿ ಪೂಜಿತ ಕಡಿಯಾಲ ಹಾಗೂ ನರೇಂದ್ರ ಕೊಂಡ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದಕ್ಷಿಣದ ಪ್ರಸಿದ್ಧ ತಾರಾಗಣವೇ ಒಂದಾಗಿದ್ದು, ಶಿವರಾಜ್‌ಕುಮಾರ್ ಅವರೊಂದಿಗೆ ತೆಲುಗು ನಟ ರಾಜ್ ತರುಣ್, ಶಿವಾಜಿ, ವರಲಕ್ಷ್ಮಿ ಶರತ್‌ಕುಮಾರ್‌, ಸಾಯಿ ಕುಮಾರ್, ರಾಜಾ ರವೀಂದ್ರ, ವಿಟಿವಿ ಗಣೇಶ್, ಸಪ್ತಗಿರಿ, ಗೆಟಪ್ ಶ್ರೀನು, ಶತ್ರು, ಮಹೇಶ್ ವಿಟ್ಟ ಮತ್ತು ಅತಿರಾ ರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ತಾಂತ್ರಿಕವಾಗಿಯೂ ಅತ್ಯುನ್ನತ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ಜಗದೀಶ್ ಚೀಕಾಟಿ ಛಾಯಾಗ್ರಹಣ ಹಾಗೂ ಮಾರ್ತಾಂಡ್ ಕೆ. ವೆಂಕಟೇಶ್ ಸಂಕಲನ ಹೊಣೆ ಹೊತ್ತಿದ್ದಾರೆ. ಲೇಖಕ್ ರಾಮ್ ಅವರ ಹೆಚ್ಚುವರಿ ಚಿತ್ರಕಥೆ-ಸಂಭಾಷಣೆ ಮತ್ತು ರಾಘವ ಅವರ ಕಲಾ ನಿರ್ದೇಶನ, ಅದ್ಭುತ ವಿಎಫ್‌ಎಕ್ಸ್ (VFX) ತಂತ್ರಜ್ಞಾನದೊಂದಿಗೆ ತಯಾರಾಗುತ್ತಿರುವ ‘ಕೂರ್ಮಾವತಾರ್’ ಶೀಘ್ರದಲ್ಲೇ ಭಾರತದ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ.

- Advertisement -

Latest News

error: Content is protected !!