- Advertisement -


- Advertisement -
ಕಡಬ: ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯೊಂದರ ಟ್ಯಾಂಕ್‌ನಿಂದ ಬರೋಬ್ಬರಿ 400 ಲೀಟರ್ ಡೀಸೆಲ್ ಅನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ನೆಲ್ಯಾಡಿ ಪೇಟೆಯಲ್ಲಿ ನಡೆದಿದೆ.
ಘಟನೆಯ ವಿವರ: ಮಂಗಳೂರು ಕಡೆಯಿಂದ ಬಾಕ್ಸೈಟ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕ, ರಾತ್ರಿ ನೆಲ್ಯಾಡಿ ಪೇಟೆಯ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಆಗಮಿಸಿ ಲಾರಿ ಚಾಲನೆ ಮಾಡಲು ಯತ್ನಿಸಿದಾಗ ಡೀಸೆಲ್ ಇಲ್ಲದೆ ವಾಹನ ರಸ್ತೆಯಲ್ಲೇ ನಿಂತಿದೆ. ಸಂಶಯಗೊಂಡು ಪರಿಶೀಲಿಸಿದಾಗ ಕಳ್ಳರು ರಾತ್ರೋರಾತ್ರಿ ಲಾರಿಯ ಟ್ಯಾಂಕ್‌ನಲ್ಲಿದ್ದ 400 ಲೀಟರ್‌ಗೂ ಅಧಿಕ ಡೀಸೆಲ್ ಅನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಉಪ್ಪಿನಂಗಡಿ/ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
- Advertisement -


