Wednesday, September 23, 2026
Homeಉದ್ಯಮಮಹೇಶ್ ಮೋಟರ್ಸ್ ನಿರ್ದೇಶಕ, ವಾಸ್ತುತಜ್ಞ ಮಹೇಶ್ ಶೇಕ ನಿಧನ

ಮಹೇಶ್ ಮೋಟರ್ಸ್ ನಿರ್ದೇಶಕ, ವಾಸ್ತುತಜ್ಞ ಮಹೇಶ್ ಶೇಕ ನಿಧನ

- Advertisement -
- Advertisement -

ಮಂಗಳೂರಿನ ಪ್ರಸಿದ್ಧ ಮಹೇಶ್ ಮೋಟರ್ಸ್‌ನ ಮಾಲಕರಾದ ಎ.ಕೆ. ಜಯರಾಮ ಶೇಕ ಅವರ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ಕುಲಶೇಖರ ಮೂಲದ ಮಹೇಶ್ ಶೇಕ (49) ಅವರು ಜುಲೈ 29ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.

ಮಂಗಳೂರಿನ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಬೆಂಗಳೂರಿನಲ್ಲಿ ಯಶಸ್ವಿ ವಾಸ್ತುತಜ್ಞರಾಗಿಯೂ ಗುರುತಿಸಿಕೊಂಡಿದ್ದ ಅವರು, ತಮ್ಮ ಸರಳತೆ, ಸೌಜನ್ಯಯುತ ನಡವಳಿಕೆ ಹಾಗೂ ನಾಯಕತ್ವದ ಗುಣಗಳಿಂದ ಸಾರಿಗೆ ರಂಗದಲ್ಲಿ ಅಪಾರ ಗೌರವ ಗಳಿಸಿದ್ದರು.

ಅವರು ತಂದೆ, ತಾಯಿ, ಪತ್ನಿ ಮತ್ತು ಪುತ್ರಿ, ಸಹೋದರ, ಸಹೋದರಿಯನ್ನು ಅಗಲಿರುವ ಅವರ ಅಕಾಲಿಕ ಅಗಲಿಕೆ ಕರಾವಳಿ ಕರ್ನಾಟಕದ ಸಾರಿಗೆ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದ್ದು, ಹಲವು ಗಣ್ಯರು ಹಾಗೂ ಉದ್ಯಮದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!