- Advertisement -


- Advertisement -
ಚಿಕ್ಕಮಗಳೂರು ಮೂಡಿಗೆರೆ ಪಟ್ಟಣದ ನೂತನ ಲೇಔಟ್ನಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಮೂಲದ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಬಂಧಿತ ಆರೋಪಿಗಳು. ಬಂಧಿತರಿಂದ ₹200 ಮುಖಬೆಲೆಯ 90 ನಕಲಿ ನೋಟುಗಳನ್ನು (ಒಟ್ಟು ₹18,000 ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.
ವಿಶೇಷವೆಂದರೆ, ಈ ನೋಟುಗಳ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಬದಲು ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿತ್ತು. ಮಂಗಳೂರಿನಿಂದ ಈ ನೋಟುಗಳನ್ನು ತಂದಿದ್ದ ಮಹಮದ್ ಅಲಿ, ಮೂಡಿಗೆರೆಯಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಠಾಣೆ ಪೊಲೀಸರು, ನೋಟುಗಳ ಮುದ್ರಣ ಹಾಗೂ ಜಾಲದ ಹಿಂದಿರುವ ಇತರರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
- Advertisement -


