Thursday, July 23, 2026
Homeಕರಾವಳಿಉಡುಪಿವಾರದ ಹಿಂದೆಯಷ್ಟೇ ಹೊಸ ಆಟೋ ಖರೀದಿಸಿದ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು!

ವಾರದ ಹಿಂದೆಯಷ್ಟೇ ಹೊಸ ಆಟೋ ಖರೀದಿಸಿದ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು!

- Advertisement -
- Advertisement -

ಉಡುಪಿ: ತಾಲೂಕಿನ ಆದಿಉಡುಪಿಯ ಮಧ್ವನಗರದಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುಃಖಕರ ಘಟನೆ ನಡೆದಿದೆ.

ಮೃತರನ್ನು ಆದಿಉಡುಪಿ ರಿಕ್ಷಾ ನಿಲ್ದಾಣದ ಚಾಲಕ, ಮಧ್ವನಗರ ನಿವಾಸಿ ಸುರೇಂದ್ರ (42) ಎಂದು ಗುರುತಿಸಲಾಗಿದೆ. ಸೌಮ್ಯ ಹಾಗೂ ಸರಳ ಸ್ವಭಾವದವರಾಗಿದ್ದ ಸುರೇಂದ್ರ ಅವರು ಕೇವಲ ಒಂದು ವಾರದ ಹಿಂದಷ್ಟೇ ಹೊಸ ಆಟೋ ರಿಕ್ಷಾವನ್ನು ಖರೀದಿಸಿದ್ದರು.

ಬುಧವಾರ ತಡರಾತ್ರಿ ಕುಟುಂಬಸ್ಥರೆಲ್ಲರೂ ನಿದ್ರಿಸುತ್ತಿದ್ದ ಸಮಯದಲ್ಲಿ ಸುರೇಂದ್ರ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!