Wednesday, July 22, 2026
Homeಕರಾವಳಿಮಂಗಳೂರಿನ ವಿವಿಧ ಭಾಗಗಳಲ್ಲಿ ಜುಲೈ 22 ಮತ್ತು 23 ರಂದು ವಿದ್ಯುತ್ ವ್ಯತ್ಯಯ

ಮಂಗಳೂರಿನ ವಿವಿಧ ಭಾಗಗಳಲ್ಲಿ ಜುಲೈ 22 ಮತ್ತು 23 ರಂದು ವಿದ್ಯುತ್ ವ್ಯತ್ಯಯ

- Advertisement -
- Advertisement -

ಮಂಗಳೂರು: ಮೆಸ್ಕಾಂ ಪ್ರಕಟಣೆಯ ಪ್ರಕಾರ, ಮಂಗಳೂರಿನ ವಿವಿಧ ಭಾಗಗಳಲ್ಲಿ ಜುಲೈ 22 ಮತ್ತು 23 ರಂದು ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜುಲೈ 22 ರಂದು ಉರ್ವಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11ಕೆವಿ ಡೊಮಿನಿಕ್ ಚರ್ಚ್ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿದ್ದು, ಡೊಮಿನಿಕ್ ಚರ್ಚ್, ಶಾಂತಿಲೇನ್, ಕೋಡಿಕಲ್ ಕಟ್ಟೆ, ನಾಗಬ್ರಹ್ಮಸನ್ನಿಧಿ ರಸ್ತೆ, ಎಸ್.ಎನ್.ಡಿ.ಪಿ, ಆಲಗುಡ್ಡೆ, ವಿವೇಕಾನಂದ ನಗರ, ಜೆ.ಬಿ. ಲೋಬೋ ರಸ್ತೆ, ಕೊಟ್ಟಾರ ಚೌಕಿ ಹಾಗೂ ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಇನ್ನು ಜುಲೈ 23 ರಂದು ಕಂಕನಾಡಿ 33/11ಕೆವಿ ಉಪಕೇಂದ್ರದ ಅತ್ತಾವರ, ಫಳ್ನೀರ್, ಮಿಷನ್ ಕಂಪೌಂಡ್, ಬೆಂದೂರು, ಕರಾವಳಿ ಮತ್ತು ಫಾದರ್ ಮುಲ್ಲರ್ ಫೀಡರ್‌ಗಳಲ್ಲಿ ನಿರ್ವಹಣಾ ಕೆಲಸಗಳು ನಡೆಯಲಿವೆ. ಪರಿಣಾಮವಾಗಿ ಕಂಕನಾಡಿ, ವೆಲೆನ್ಸಿಯಾ, ಸೈಂಟ್ ಜೋಸೆಫ್ ನಗರ, ಬಿ.ವಿ. ರೋಡ್, ಗೋರಿಗುಡ್ಡ, ಉಜ್ಜೋಡಿ, ಹೈಲ್ಯಾಂಡ್, ವಾಸ್ ಲೇನ್, ಬಲ್ಮಠ ಮಿಷನ್ ಕಂಪೌಂಡ್, ಬಲ್ಮಠ ನ್ಯೂ ರೋಡ್, ಕಂಕನಾಡಿ ಬೈಪಾಸ್, ಕಲ್ಪನಾ ರೋಡ್, ಬೆಂದೂರುವೆಲ್, ಲೋವರ್ ಬೆಂದೂರು ಮತ್ತು ಯೂನಿಟಿ, ಅಥೆನಾ ಹಾಗೂ ಫಾದರ್ ಮುಲ್ಲರ್ಸ್ ಆಸ್ಪತ್ರೆಗಳು ಸೇರಿದಂತೆ ಸೈಂಟ್ ಮೇರೀಸ್ ಸ್ಕೂಲ್, ಹೆಬಿಕ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

- Advertisement -

Latest News

error: Content is protected !!