
ಮಂಗಳೂರಿನ ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸಭಾಂಗಣದಲ್ಲಿ ಆಗಸ್ಟ್ 8 ಮತ್ತು 9 ರಂದು ವಿಕಲಚೇತನರಿಗಾಗಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರವನ್ನು ಆಯೋಜಿಸಲಾಗಿದೆ.
ಕರ್ನಾಟಕ ಅನಿವಾಸಿ ಭಾರತೀಯರ ಒಕ್ಕೂಟ (ಜಿದ್ದಾ ಘಟಕ), ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ (ಬೆಂಗಳೂರು), ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ಮಂಗಳೂರು) ಹಾಗೂ ರೋಶನಿ ನಿಲಯ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ಹಾಗೂ ಹಗುರವಾದ ‘ಜೈಪುರ್ ಲಿಂಬ್’ ಕೃತಕ ಅಂಗಾಂಗಗಳನ್ನು ಶಿಬಿರದ ದಿನದಂದೇ ಅಳತೆ ತೆಗೆದು ಅಳವಡಿಸಿಕೊಡಲಾಗುತ್ತದೆ. ತಪಾಸಣೆ, ಕೃತಕ ಅಂಗಾಂಗ ಹಾಗೂ ಜೋಡಣೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಜಿಲ್ಲೆ ಅಥವಾ ರಾಜ್ಯದ ಬಡ ಮತ್ತು ಅಶಕ್ತ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಆಸಕ್ತರು ಶಿಬಿರಕ್ಕೂ ಮುನ್ನವೇ ತಮ್ಮ ಅಂಗಾಂಗದ ಫೋಟೋ, ಆಧಾರ್ ಕಾರ್ಡ್ ಮತ್ತು ಸಂಪರ್ಕ ಸಂಖ್ಯೆಯನ್ನು 9019111177, 9743266456 ಅಥವಾ 9341111116 ಸಂಖ್ಯೆಗಳಿಗೆ ವಾಟ್ಸ್‌ಆ್ಯಪ್ (WhatsApp) ಮಾಡುವ ಮೂಲಕ ಮುಂಗಡವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.


