Monday, June 8, 2026
Homeಕರಾವಳಿಉಡುಪಿಉಡುಪಿ: ಬೇಕರಿ ಉತ್ಪನ್ನ ತಯಾರಿಕಾ ಘಟಕದಲ್ಲಿ ಓವನ್ ಸ್ಪೋಟ, ಮಾಲೀಕ ಸ್ಥಳದಲ್ಲೇ ಸಾವು

ಉಡುಪಿ: ಬೇಕರಿ ಉತ್ಪನ್ನ ತಯಾರಿಕಾ ಘಟಕದಲ್ಲಿ ಓವನ್ ಸ್ಪೋಟ, ಮಾಲೀಕ ಸ್ಥಳದಲ್ಲೇ ಸಾವು

- Advertisement -
- Advertisement -

ಉಡುಪಿ: ಬೇಕರಿ ತಿನಿಸು ತಯಾರಿ ವೇಳೆ ಓವನ್ ಸ್ಪೋಟಗೊಂಡ ಪರಿಣಾಮ ಬೇಕರಿ ಮಾಲೀಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ ನಡೆದಿದೆ.

ಮೃತರನ್ನು ಬೇಕರಿಯ ಮಾಲಕ ರಾಬರ್ಟ್ ಪುಟಾರ್ಡೋ ಎಂದು ಗುರುತಿಸಲಾಗಿದೆ.

ಓವನ್ ನಿರ್ವಹಣೆಗೆಂದು ಮಾಲೀಕ ರಾಬರ್ಟ್ ಅದರ ಸಮೀಪ ಹೋದಾಗ ದಿಢೀರನೆ ಸ್ಫೋಟ ಸಂಭವಿಸಿದೆ. ಓವನ್ ಬಾಗಿಲು ಬಡಿದು ಅವರ ದೇಹ ಸಂಪೂರ್ಣ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!