
ಬೆಳ್ತಂಗಡಿ: ಶಿರ್ಲಾಲಿನಲ್ಲಿ ಎಸ್.ಐ.ಆರ್ ಕಾರ್ಯನಿರತ ಬಿ.ಎಲ್.ಓ. ಗೆ ಜಾತಿ ನಿಂದನೆ ಮಾಡಿರುವ ಪ್ರಕರಣದ ಆರೋಪಿ ಮಹಿಳೆ ಯಶೋಧ ಆಚಾರಿಗೆ (60) ಮಂಗಳೂರಿನ ಸೆಕ್ಷನ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿ ಜು.8 ರಂದು ಸಂಜೆ ಬಿಡುಗಡೆ ಮಾಡಿದೆ.
ಪ್ರಕರಣದ ವಿವರ: ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ ಆಗಿ ಕೆಲಸ ಮಾಡುತ್ತಿದ್ದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎ.ಎಲ್.ಒ ಮಾಧವ ಎಂಬರೊಂದಿಗೆ ಜು.6 ರಂದು ಬೆಳಗ್ಗೆ 11:30 ಕ್ಕೆ ಮನೆಯ ಅಂಗಳಕ್ಕೆ ಪ್ರವೇಶಿಸಿದಾಗ “ನೀನು ಅಲ್ಲಿಯೇ ನಿಲ್ಲು ನಿಮ್ಮ ಜಾತಿಯವರು ಇಲ್ಲಿಗೆ ಬರುವುದಿಲ್ಲ” ಎಂದು ಹೇಳಿದ್ದು ಮನೆಯ ಸಿಟ್ ಔಟ್ ಗೆ ಪ್ರವೇಶ ನೀಡದೆ ಮೆಟ್ಟಿಲು ಬಳಿಯೇ ಮಾತಿನಲ್ಲಿಯೇ ತಡೆದು ಯಶೋಧ ಆಚಾರಿ ನಿಲ್ಲಿಸಿ ಅಪಮಾನ ಮಾಡಿ ಜಾತಿ ನಿಂದನೆ ಮಾಡಿರುವುದಾಗಿ ಜು.7 ರಂದು ದೂರು ನೀಡಿದ್ದಾರೆ.
ಬಿ.ಎಲ್.ಒ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಯಶೋಧ ಆಚಾರಿ(60) ವಿರುದ್ಧ ಜು.7 ರಂದು ಸಂಜೆ SC/ST act-2015(u/s-3(1)(r),3(2)(va)) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವೇಣೂರು ಪೊಲೀಸರು ಆರೋಪಿಯನ್ನು ಜು.8 ರಂದು ಬಂಧಿಸಿ ಸಂಜೆ ಮಂಗಳೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದಾಗ ಯಶೋಧ ಆಚಾರಿ(60) ಗೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.


