- Advertisement -


- Advertisement -
ಭಟ್ಕಳ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಂಕಿ ಪೊಲೀಸ್ ಠಾಣೆಯ ಎಸ್‌ಐ ಅಭಿನಂದನ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮೂಲದ ಅಭಿನಂದನ ನಾಲ್ಕು ತಿಂಗಳ ಹಿಂದೆ ಮಂಕಿ ಠಾಣೆಯ ಎಸ್‌ಐ ಆಗಿ ನೇಮಕಗೊಂಡಿದ್ದರು. ಸದ್ಯ ಭಟ್ಕಳ ನಗರ ವ್ಯಾಪ್ತಿಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರ ಬಾಲಕಿಯನ್ನು ಭಟ್ಕಳಕ್ಕೆ ಕರೆಯಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾಗಿ ಭಟ್ಕಳ ನಗರ ಠಾಣೆಗೆ ದೂರು ಬಂದಿತ್ತು. ಎಸ್‌ಐ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಬಂಧಿಸಲಾಗಿದೆ.
- Advertisement -


